
ಸಂಗಾತಿಯೊಂದಿಗೆ ಸಂಭೋಗ ನಿರತವಾಗಿರುವಾಗಲೇ ಲಂಬವಾಗಿ ಮುರಿದ ಮರ್ಮಾಂಗ: ವಿಶ್ವದಲ್ಲಿಯೇ ಮೊಟ್ಟಮೊದಲು ಪ್ರಕರಣ
Friday, July 2, 2021
ಲಂಡನ್: ಸಂಭೋಗ ನಡೆಸುತ್ತಿರುವ ಸಂದರ್ಭದಲ್ಲಿಯೇ ವ್ಯಕ್ತಿಯೋರ್ವರ ಗುಪ್ತಾಂಗ ಲಂಬವಾಗಿ ಮುರಿದಿದೆ. ಈ ರೀತಿಯಲ್ಲಿ ಶಿಶ್ನ ಮುರಿದಿರುವ ಮೊದಲ ಪ್ರಕರಣವೆಂದು ಯುಕೆ ವೈದ್ಯರು ದಾಖಲಿಸಿದ್ದಾರೆ.
40 ವರ್ಷದ ವ್ಯಕ್ತಿಯು ತನ್ನ ಜೊತೆಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಸಂದರ್ಭ ಗುದದ್ವಾರ ಮತ್ತು ಜನನಾಂಗಗಳು ನಡುವಿನ ಪೆರಿನಿಯಮ್ ಏರಿಯಾದಲ್ಲಿ ಶಿಶ್ನವು ಮುರಿದಿರುವುದಾಗಿ ವೈದ್ಯರು ತಿಳಿಸಿದ್ದಾರೆ. “ಶ್ವಾನ ಶೈಲಿ” ಮತ್ತು “ಮ್ಯಾನ್ ಆನ್ ಟಾಪ್” ಪೊಸಿಸನ್ಗಳಿಂದ ಈ ರೀತಿ ಶಿಶ್ನ ಮುರಿಯುವ ಸಂಭವವಿದೆ. ಶಿಶ್ನದಲ್ಲಿ ಯಾವುದೇ ಮೂಳೆಗಳಿರುವುದಿಲ್ಲ. ಆದರೆ ಶಿಶ್ನವು ತನ್ನ ಸಂಗಾತಿಯಿಂದ ಜಾರಿಬಿದ್ದು, ಇದ್ದಕ್ಕಿದ್ದಂತೆ ಬಾಗಿದಾಗ ಈ ರೀತಿ ಸಂಭವಿಸಲು ಸಾಧ್ಯ ಎಂದು ಹೇಳಿದ್ದಾರೆ.
ರೋಗಿಗೆ ಚಿಕಿತ್ಸೆ ನೀಡಿರುವವರು ವೈದ್ಯರು ಯಾರ್ಕ್ ಮೂಲದವರು ಎಂದು ಹೇಳಲಾಗಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ನಲ್ಲಿ ಈ ಪ್ರಕರಣವು ವರದಿಯಾಗಿದೆ. ಈ ಹಿಂದೆ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಅಡ್ಡವಾಗಿ ಶಿಶ್ನ ಮುರಿತಕ್ಕೆ ಒಳಗಾಗಿವೆ. ಆದರೆ, ಇದೇ ಮೊದಲ ಬಾರಿಗೆ ಶಿಶ್ನವು ಲಂಬವಾಗಿ ಮುರಿದಿದೆ ಎಂದು ವೈದ್ಯರು ಹೇಳಿದರು. ಮುರಿತ ಸಂಭವಿಸಿದಾಗ ಯಾವುದೇ ಶಬ್ದ ಕೇಳಲಿಲ್ಲ. ಏಕೆಂದರೆ ಅಡ್ಡವಾಗಿ ಮುರಿತಗಳಾದರೆ ಶಬ್ದ ಸಂಭವಿಸುತ್ತದೆ. ಇದು ಲಂಬವಾಗಿರುವುದರಿಂದ ಅದು ಸಂಭವಿಸಿಲ್ಲ ಎಂದಿದ್ದಾರೆ. ಮುರಿದ ಗಾಯದ ನಂತರ ರೋಗಿಯ ಶಿಶ್ನ ಕ್ರಮೇಣ ಊದಿಕೊಳ್ಳುತ್ತದೆ. ವೈದ್ಯರ ಚಿಕಿತ್ಸೆಯ ಆರು ತಿಂಗಳ ನಂತರ ಅದೇ ಗುಣಮಟ್ಟದ ನಿಮಿರುವಿಕೆಯನ್ನು ಸಾಧಿಸಲು ಮನುಷ್ಯನಿಗೆ ಸಾಧ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.