ಆನ್ ಲೈನ್ ಕ್ಲಾಸ್ ಮಧ್ಯೆಯೇ ವಿದ್ಯಾರ್ಥಿಯ ಪ್ರಣಯದಾಟ: ಕ್ಯಾಮರಾ ಆಫ್ ಮಾಡದೆ ನಡೆಯಿತು ಎಡವಟ್ಟು
Tuesday, July 6, 2021
ವಿಯೆಟ್ನಾಂ: ಆನ್‌ಲೈನ್ ತರಗತಿಗಳು ಹಾಗೂ ಆನ್‌ಲೈನ್ ಮೀಟಿಂಗ್‌ಗಳು ನಡೆಯುವಾಗ ಸ್ವಲ್ಪ ಮೈಮರೆತರೂ ಆಗುವ ಎಡವಟ್ಟು ಅಷ್ಟಿಷ್ಟಲ್ಲ. ಕ್ಯಾಮೆರಾ ಆಫ್ ಮಾಡುವುದನ್ನು ಮರೆತೋ, ಇಲ್ಲವೇ ಕ್ಯಾಮೆರಾ ಆನ್ ಇರುವುದು ತಿಳಿಯದೆಯೋ ಮಾಡುವ ಅನ್ಯ ಚಟುವಟಿಕೆಗಳಿಂದ ಮಾನ ಹರಾಜಾದ ಎಷ್ಟೋ ಘಟನೆಗಳು ನಡೆದಿವೆ. ಅಂಥದ್ದೇ ಘಟನೆ ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಿಂದ ವರದಿಯಾಗಿದೆ.
ವಿಯೆಟ್ನಾಂ ವಿವಿಯ ಆನ್‌ಲೈನ್ ಕ್ಲಾಸ್‌ಗಳು ನಡೆಯುತ್ತಿದ್ದು, ಇನ್ನೂ ಕ್ಲಾಸ್ ಮುಗಿದಿರಲಿಲ್ಲ. ಮಧ್ಯೆ ಇದ್ದ ವಿಶ್ರಾಂತಿಯ ಅವಧಿಯಲ್ಲಿ ಕಂಪ್ಯೂಟರ್‌ನ ಕ್ಯಾಮೆರಾ ಆಫ್ ಮಾಡುವುದನ್ನು ಮರೆತು ವಿದ್ಯಾರ್ಥಿಯೋರ್ವನು ಅಲ್ಲಿಯೇ ಇದ್ದ ತನ್ನ ಪ್ರೇಯಸಿಯ ಜತೆಗೆ ಸೆಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದಾನೆ. ಇದನ್ನು ಆತನ ಉಪನ್ಯಾಸಕರು ಹಾಗೂ ಸಹಪಾಠಿಗಳು ಗಮನಿಸಿದ್ದಾರೆ. ಕೂಡಲೇ ಆತನಿಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದ್ದಾರೆ.
ತಕ್ಷಣ ಆತ ಕ್ಯಾಮೆರಾ ಆಫ್ ಮಾಡಿದ್ದಾನೆ. ನಂತರ ಬಟ್ಟೆ ಧರಿಸಿ ಬಂದು ಎಲ್ಲರ ಕ್ಷಮೆಯಾಚಿಸಿದ್ದಾನೆ. ಆದರೆ ಈ ಕಾಮದಾಟದ ವೀಡಿಯೋ ಅದಾಗಲೇ ಜಾಲತಾಣದಲ್ಲಿ ಸೋರಿಕೆಯಾಗಿದೆ. ಅನೇಕ ಮಂದಿ ಇದನ್ನು ಶೇರ್ ಮಾಡಿಕೊಂಡಿರುವ ಕಾರಣ, ಸಾಕಷ್ಟು ವೈರಲ್ ಆಗಿಬಿಟ್ಟಿದೆ!