-->

ವೈದ್ಯಲೋಕಕ್ಕೆ ಸವಾಲಾಗಿರುವ ಎರಡು ಯೋನಿ, ಎರಡು ಗರ್ಭಕೋಶವಿರುವ ಯುವತಿ: ಎರಡು ಬಾರಿ ಮಾಸಿಕ ಋತುಸ್ರಾವವಾಗುತ್ತದಂತೆ ಈಕೆಗೆ

ವೈದ್ಯಲೋಕಕ್ಕೆ ಸವಾಲಾಗಿರುವ ಎರಡು ಯೋನಿ, ಎರಡು ಗರ್ಭಕೋಶವಿರುವ ಯುವತಿ: ಎರಡು ಬಾರಿ ಮಾಸಿಕ ಋತುಸ್ರಾವವಾಗುತ್ತದಂತೆ ಈಕೆಗೆ


ಪೆನ್ಸಿಲ್ವೇನಿಯಾ: ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯ 20 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಹುಟ್ಟುತ್ತಲೇ ಎರಡು ಯೋನಿ ಎರಡು ಗರ್ಭಾಶಯ ಇದ್ದು, ತಿಂಗಳಿಗೆ ಎರಡು ಬಾರಿ ಮಾಸಿಕ ಋತುಸ್ರಾವವೂ ಆಗುವ ಮೂಲಕ‌
ವೈದ್ಯಲೋಕಕ್ಕೇ ಸವಾಲಾಗಿದ್ದಾಳೆ.

ತನಗೆ ಈ ರೀತಿಯ ವಿಚಿತ್ರ ಸಮಸ್ಯೆ ಇರುವುದು ಈಕೆಗೆ 18 ವರ್ಷದವರೆಗೂ ತಿಳಿದೇ ಇರಲಿಲ್ಲವಂತೆ. ಪ್ರತಿ ತಿಂಗಳೂ ಎರಡು ಬಾರಿ ಮಾಸಿಕ ಋತುಸ್ರಾವ ಆಗುತ್ತಿದ್ದುದರಿಂದ ವೈದ್ಯರ ಬಳಿ ತಪಾಸಣೆ ಮಾಡಿಸಿದ್ದಳಂತೆ. ಆದರೆ ಪರಿಹಾರ ದೊರಕಿರಲಿಲ್ಲ. ನಂತರ 18ನೇ ವಯಸ್ಸಿನಲ್ಲಿ ವೈದ್ಯರೊಬ್ಬರು ಇದನ್ನು ಪತ್ತೆ ಹಚ್ಚಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ. 

ಜನನಪೂರ್ವದಲ್ಲಿ ಕಂಡುಬರುವ ಡೀ ಏಂಜೆಲೊ ಯುಟೇರಿನೇ ಡೈಡೆಲ್‌ಫಿಸ್‌ ಎಂಬ ಸಮಸ್ಯೆಯಿಂದ ಈಕೆ ಬಳಲುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ. ಈ ಸಮಸ್ಯೆಗೆ ಒಳಗಾದ ಹೆಣ್ಣುಮಗುವಿಗೆ ಹುಟ್ಟಿನಿಂದಲೇ ಎರಡು ಗರ್ಭಕೋಶ, ಯೋನಿ ಇರುವುದಾಗಿ ಅವರು ಹೇಳಿದ್ದಾರೆ. ವಿಚಿತ್ರ ಎಂದರೆ, ಇಂಥವರು ಎರಡೂ ಗರ್ಭಕೋಶಗಳಲ್ಲಿಯೂ ಗರ್ಭಧರಿಸುವ ಸಾಧ್ಯತೆಗಳಿರುತ್ತವಂತೆ! 

ಈಕೆ ಇದೀಗ ಈ ಬಗ್ಗೆ ತಿಳಿಯಲು ಒಂದು ಗರ್ಭಕೋಶದ ಮೂಲಕ ಗರ್ಭವತಿಯಾಗಿದ್ದಾಳೆ. ಅಚ್ಚರಿಯ ವಿಷಯ ಅಂದರೆ ಗರ್ಭ ಧರಿಸಿರುವ ಅವಧಿಯಲ್ಲಿ ಇನ್ನೊಂದು ಗರ್ಭಕೋಶದ ಮೂಲಕ ಈಕೆಗೆ ಋತುಸ್ರಾವವಾಗುತ್ತಿದೆಯಂತೆ. ಅದೇ ಸಮಯದಲ್ಲಿ ಎರಡನೆಯ ಗರ್ಭಕೋಶದ ಮೂಲಕ ಗರ್ಭ ಧರಿಸಿದ್ದಾಳೆ. ಈಕೆಯ ಬಗ್ಗೆ ಇನ್ನಷ್ಟು ಅಧ್ಯಯನಗಳನ್ನು ವೈದ್ಯರು ನಡೆಸುತ್ತಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99