
ಪ್ರೀತಿಸಿದಾಕೆಯ ಮನೆಗೆ ಹೋಗಿದ್ದ ಬಾಲಕನ ಮರ್ಮಾಂಗವನ್ನೇ ಕತ್ತರಿಸಿ ಕೊಲೆ
ಲಖನೌ: ಪ್ರೀತಿಸಿದ ಹುಡುಗಿಯ ಮನೆಗೆ ಹೋದ ಬಾಲಕನಿಗೆ ಯುವತಿ ಮನೆಯವರು ಥಳಿಸಿ, ಮರ್ಮಾಂಗವನ್ನೇ ಕತ್ತರಿಸಿ ಅಮಾನುಷವಾಗಿ ಕೊಂದ ಘಟನೆ ಬಿಹಾರದ ಮುಜಾಫರ್ನಲ್ಲಿ ನಡೆದಿದೆ.
ಸೌರಭ್ ಕುಮಾರ್ ಎಂಬ ಬಾಲಕನೇ ಕೊಲೆಯಾದಾತ.
ಸೌರಭ್ ತನ್ನ ಪಕ್ಕದ ಗ್ರಾಮವಾದ ಸೊರ್ಬಾರಾ ಹಳ್ಳಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆಕೆ ಕೂಡ ಈತನನ್ನು ಪ್ರೀತಿಸುತ್ತಿದ್ದಳು. ಹುಡುಗಿಯ ಮನೆಯಲ್ಲಿ ಯಾರೂ ಇಲ್ಲ ಎನ್ನುವ ಕಾರಣಕ್ಕೆ ಆಕೆಯ ಮನೆಗೆ ಸೌರಭ್ ಹೋಗಿದ್ದಾನೆ. ಆದರೆ ಇದೇ ವೇಳೆ ಇಬ್ಬರೂ ಒಟ್ಟಿಗೇ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನೂ ಒಟ್ಟಿಗೇ ನೋಡಿದ ಬಾಲಕಿಯ ಮನೆಯವರು ಹುಡುಗನಿಗೆ ಸರಿಯಾಗಿ ಥಳಿಸಿ, ಆತನ ಮರ್ಮಾಂಗವನ್ನೇ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದ.
ಇದರಿಂದ ಸಿಟ್ಟಿಗೆದ್ದ ಬಾಲಕನ ಮನೆಯವರು ಹುಡುಗಿಯ ಮನೆಯ ಎದುರೇ ಸೌರಭ್ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕೊಲೆ ಮಾಡಿರುವ ಆರೋಪ ಹೊತ್ತ ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.