ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಪೋ ಮ್ಯಾನೇಜರ್ ಶಿರ್ಕೆ, ‘ನೀರಿನ ಮಟ್ಟ ನಿಮಿಷದಿಂದ ನಿಮಿಷಕ್ಕೆ ಏರುತ್ತಲೇ ಇತ್ತು. ಡಿಪೋ ಆಫೀಸಿನೊಳಗೆ ಹಣವನ್ನು ಇಟ್ಟರೆ ಆ ಆಫೀಸಿನೊಳಗೆ ನೀರು ನುಗ್ಗಿ ಹಣ ಕೊಚ್ಚಿಕೊಂಡು ಹೋಗುವ ಸಾಧ್ಯತೆಯಿತ್ತು. ಪ್ರತಿದಿನದ ಆದಾಯವನ್ನು ಜೋಪಾನವಾಗಿ ತಲುಪಬೇಕಾದಲ್ಲಿಗೆ ತಲುಪಿಸಬೇಕಾದ ಜವಾಬ್ದಾರಿ ನನ್ನ ಮೇಲಿತ್ತು. ಹೀಗಾಗಿ, ನನ್ನ ಜೀವದ ಬಗ್ಗೆಯೂ ಯೋಚನೆ ಮಾಡದೆ ಆ ಹಣವನ್ನು ರಕ್ಷಣೆ ಮಾಡಲು ಯೋಚಿಸಿದಾಗ ಬಸ್ನ ಮೇಲ್ಭಾಗ ಕಾಣಿಸಿತು. ಬೇರೆ ಬಸ್ಗಳೆಲ್ಲ ಮುಳುಗುವ ಹಂತದಲ್ಲಿದ್ದವು. ಆದರೆ, ಸ್ವಲ್ಪ ಎತ್ತರದ ಜಾಗದಲ್ಲಿ ನಿಲ್ಲಿಸಿದ್ದ ಒಂದು ಬಸ್ ಮುಳುಗುವಷ್ಟು ನೀರು ಬರಲಾರದು ಎಂಬ ಧೈರ್ಯದಿಂದ ಆ ಬಸ್ ಏರಿ ಕುಳಿತೆ’ ಎಂದು ಹೇಳಿದ್ದಾರೆ