ಹುಡುಗಿಗೆ ಹುಡುಗಿಯೊಂದಿಗೆ ಲವ್...ಇದು ಇಬ್ಬರು ಹುಡುಗಿಯರ ವಿಶಿಷ್ಟ ಪ್ರೇಮಕಥೆ..!!
Tuesday, July 27, 2021
ಅಲಿಗಢ್: ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಭೇಟಿಯಾದ ನಂತರ ಇಬ್ಬರು ಹುಡುಗಿಯರ ನಡುವೆ ಪ್ರೀತಿ ಬೆಳದಿದ್ದು, ಇಬ್ಬರು ಒಂದಾಗಿ ಬಾಳುವುದಾಗಿ ಪ್ರತಿಜ್ಞೆ ಮಾಡಿದರು. ಆದರೆ, ಕುಟುಂಬ ಇದಕ್ಕೆ ನಿರಾಕರಿಸಿ ಯುವತಿಗೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಅಡ್ಡಿ ಅಮಾಮದಾಪುರ ಗ್ರಾಮದ ನಿವಾಸಿ ಬಬ್ಲಿ ದೆಹಲಿ ವಿಮಾನ ನಿಲ್ದಾಣದ ಕ್ಯಾಂಟೀನ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ, ದೀಪಿಕಾನನ್ನ ಭೇಟಿಯಾಗಿದ್ದರು. ಇದರ ನಂತರ, ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು, ಚಾಟಿಂಗ್ ಮಾಡುವುದು ಮುಂದುವರಿಯುತ್ತ ಇಬ್ಬರು ಮಧ್ಯೆಯ ಸಲುಗೆ ಹೆಚ್ಚಾಗಿ ಪ್ರೀತಿಯಲ್ಲಿ ಬಿದ್ದರು.ಆದರೆ, ಈ ಸಂಬಂಧವನ್ನು ದೀಪಿಕಾ ಕುಟುಂಬವು ಇಷ್ಟಪಡಲಿಲ್ಲ.
ಕೆಲವು ದಿನಗಳ ಹಿಂದೆ ದೀಪಿಕಾ ಫೋನ್ ಮಾಡಿ ನನ್ನ ಮದುವೆಯನ್ನು ಬೇರೆ ಯುವಕನೊಂದಿಗೆ ನಿಗದಿಪಡಿಸಲಾಗಿದೆ, ನನ್ನನ್ನು ದೆಹಲಿಗೆ ಕರೆದುಕೊಂಡು ಹೋಗುವಂತೆ ನನಗೆ ತಿಳಿಸಿದ್ದಳು. ಕೂಡಲೇ ನಾನು ದೆಹಲಿಯಿಂದ ಅಲಿಗಢ್ನ ದೀಪಿಕಾ ಮನಗೆ ತೆರಳಿದೆ. ದೀಪಿಕಾ ಕುಟುಂಬಸ್ಥರು ನನ್ನನ್ನು ಬಂಧಿಸಿ ಮನಸೋಇಚ್ಛೆ ಥಳಿಸಿದರು. ಬಳಿಕ ನನ್ನ ವಿರುದ್ಧ ಅಮಾನವೀಯವಾಗಿ ನಡೆದುಕೊಂಡರು ಎಂದು ಬಬ್ಲಿ ಆರೋಪಿಸಿದ್ದಾರೆ.
ಗಾಯದ ಮಧ್ಯೆಯೂ ನಾನು ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದೆ. ಆಗ ಪೊಲೀಸ್ ಠಾಣೆಗೆ ಗ್ರಾಮದ ಹಿರಿಯರು ಬಂದರು. ಪೊಲೀಸರು ಈ ಪ್ರಕರಣವನ್ನು ಸಾಧಾರಣ ವಿಭಾಗದಲ್ಲಿ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಐವರು ಬಂಧಿಸಲಾಗಿದ್ದು, ಅದರಲ್ಲಿ ನಾಲ್ವರಿಗೆ ಜಾಮೀನು ಸಿಕ್ಕಿದೆ ಎಂದು ಬಬ್ಲಿ ತಿಳಿಸಿದ್ದಾರೆ.