ಅಕ್ಟೋಬರ್‌ನಲ್ಲಿ ಮತ್ತೆ ಆರಂಭವಾಗಲಿದೆಯಾ ಬಿಗ್ ಬಾಸ್ ಕನ್ನಡ ಸೀಸನ್ 9..!!?
Tuesday, July 27, 2021
ಬಿಗ್ ಬಾಸ್ ಶೋ ಸಂಬಂಧಪಟ್ಟ ಮೂಲಗಳು "ಈಗ ಇರುವ ಬಿಗ್ ಬಾಸ್ ಮನೆಯಲ್ಲಿ ಕೆಲ ಬದಲಾವಣೆ ಮಾಡಿಕೊಂಡು ಶೋ ಆರಂಭಿಸಲಾಗುವುದು. ಯಾವ ಸ್ಪರ್ಧಿಗಳಿಗೂ ಕೊರೊನಾ ಪಾಸಿಟಿವ್ ಬಂದಿಲ್ಲ. ಹೀಗಾಗಿ ಈಗ ಅನುಸರಿಸುತ್ತಿರುವ ನಿಯಮ, ಕ್ರಮದಂತೆ ಬಿಗ್ ಬಾಸ್ ಕನ್ನಡ 9 ಶೋ ಆರಂಭಿಸಲಾಗುವುದು. ಸ್ಪರ್ಧಿಗಳು 10 ದಿನ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುವುದು" ಎಂದು ಹೇಳಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.