ಪ್ರೀತಿಸಿ ಮದುವೆಯಾದ ದಂಪತಿಗಳ ನಡುವೆ ಜಗಳ: ರಾಜಿಗೆಂದು ಕರೆದು ಮರ್ಡರ್..!
ದೊಡ್ಡಬಳ್ಳಾಪುರ : ದಂಪತಿಯ ನಡುವೆ ಜಗಳ ನಡೆದಿದ್ದರಿಂದ ಕಳೆದೊಂದು ವರ್ಷದಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ರಾಜಿ ಮಾಡುವುದಾಗಿ ಪತಿ ಕರೆಸಿದ್ದು, ಸಂಧಾನದ ಬದಲು ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಘಟನೆ ದೊಡ್ಡಬಳ್ಳಾಪುರ ಹೊರವಲಯದ ಕರೇನಹಳ್ಳಿಯ ಬಳಿ ನಡೆದಿದೆ.
ನವೀನ್ (30) ಕಲೆಯಾದಾತ.ನವೀನ್ ಗಾಯಿತ್ರಿ ಎಂಬಾಕೆಯನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದ. ಆದರೆ ವಿವಾಹವಾಗುವಾಗ ಇಬ್ಬರಿಗೂ 16 ವರ್ಷವಾಗಿತ್ತು. ಇವರಿಗೆ ಮೂವರು ಗಂಡು ಮಕ್ಕಳಿದ್ದರು. ನವೀನ್ ಡ್ರೈವರ್ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಆದರೆ ಕಳೆದೊಂದು ವರ್ಷದ ಹಿಂದೆ ಗಂಡ-ಹೆಂಡತಿ ನಡುವೆ ಜಗಳವಾಗಿ, ಇಬ್ಬರು ಬೇರೆ ಬೇರೆ ವಾಸವಾಗಿದ್ದರು.
ನವೀನ್ ಸ್ನೇಹಿತರ ಜೊತೆ ವಾಸವಾಗಿದ್ದರೆ, ಹೆಂಡತಿ ತವರು ಮನೆ ಸೇರಿದ್ದಳು. ಗಂಡ ಹೆಂಡತಿ ಜಗಳ ವಿಚಾರಕ್ಕೆ ಸಂಬಂಧಿಸಿದಂತೆ ಗಾಯಿತ್ರಿ ತಮ್ಮನನ್ನು ಮಾತುಕತೆಗೆಂದು ಕರೆದಿದ್ದಾಳೆ. ಅಲ್ಲದೆ ನವೀನ್ನನ್ನು ಊರಿಗೆ ಬರುವಂತೆಯೂ ತಿಳಿಸಿದ್ದಾಳೆ. ಮಾತುಕತೆಗೆಂದು ನವೀನ್ ಹೆಂಡತಿ ಮನೆಗೆ ಬಂದಿದ್ದಾನೆ.
ಮಾತುಕತೆಗೆಂದು ಕರೆದು ಪತ್ನಿ ಸಹೋದರ ನವೀನ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಇದ್ರಿಂದ ಸ್ಥಳದಲ್ಲೇ ನವೀನ್ ಸಾವನ್ನಪ್ಪಿದ್ದಾನೆ ಎಂದು ನವೀನ್ ಕುಟುಂಬಸ್ಥರು ಆರೋಪಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.