
ಕುಡಿದ ಮತ್ತಿನಲ್ಲಿ ಪತ್ನಿಯ ಮೂಗು ಕಚ್ಚಿದ ಭೂಪ..!!
Monday, July 12, 2021
ಧಾರವಾಡ : ಕುಡಿದ ಮತ್ತಿನಲ್ಲಿ ವ್ಯಕ್ತಿವೋರ್ವ ತನ್ನ ಪತ್ನಿಯ ಮೂಗು ಕಚ್ಚಿ ಪರಾರಿಯಾಗಿರುವ ಘಟನೆ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ.
ಉಮೇಶ್ ಎಂಬಾತ ತನ್ನ ಹೆಂಡತಿ ಗೀತಾ ಮೇಲೆ ಹಲ್ಲೆ ಮಾಡಿದ್ದಾನೆ.ಉಮೇಶ್, ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಗಲಾಟೆ ಮಾಡಿ ಆಕೆಯ ಮೂಗನ್ನು ಕಚ್ಚಿದ್ದಾನೆ. ಇವರಿಬ್ಬರ
ನಡುವೆ ಪದೇಪದೆ ಜಗಳ ನಡೆಯುತ್ತಿತ್ತು. ಹಾಗಾಗಿ, ಗೀತಾ ತವರು ಮನೆ ಸೇರಿದ್ದಳು.
ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಲ್ಲದೆ, ತನ್ನ ಅತ್ತೆಯ ಕತ್ತು ಹಿಸುಕಿ ಆಕೆಯ ಮೇಲೂ ಹಲ್ಲೆ ಮಾಡಿ ಉಮೇಶ್ ಪರಾರಿಯಾಗಿದ್ದಾನೆ. ಗೀತಾ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.