ತಾನು ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯಾದಳೆಂದು ಮಗಳನ್ನೇ ಕೊಚ್ಚಿ ಕೊಂದ ತಂದೆ....
Thursday, July 1, 2021
ಚೆನ್ನೈ: ಮಗಳು ತನ್ನ ಇಷ್ಟಕ್ಕೆ ವಿರೋಧವಾಗಿ ಮದುವೆಯಾದಳು ಎಂಬ ಕಾರಣಕ್ಕಾಗಿ ತಂದೆನೇ ಮಗಳನ್ನ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.
ತಂದೆ ಮಾರಿಮುತ್ತು (45) ಬಂಧಿತ ಆರೋಪಿ. ಮಗಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಕೊಲೆಗೀಡಾದ ಯುವತಿಯನ್ನು ಅಲಂಗುಲಂ ಬಳಿಯ ದಕ್ಷಿಣ ಕವಲಕುರಿಚಿ ಗ್ರಾಮದ ಶಾಲೋಮ್ ಶೀಬಾ (19) ಎಂದು ಗುರುತಿಸಲಾಗಿದೆ.
ತನ್ನ ಕುಟುಂಬದ ಆಕ್ಷೇಪಣೆಗಳ ಹೊರತಾಗಿಯೂ ಮುತ್ತುರಾಜ್ (22) ರನ್ನು ಮದುವೆಯಾದಳು. ಮದುವೆಯಾದ ಬಳಿಕ ಒಂದು ಬಾರಿಯೂ ತನ್ನ ಕುಟುಂಬಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಭಾನುವಾರ ಶೀಬಾ ಚರ್ಚ್ನ ಉತ್ಸವದಲ್ಲಿ ಭಾಗವಹಿಸಿದ ನಂತರ ತನ್ನ ಕುಟುಂಬವನ್ನು ಭೇಟಿ ಮಾಡಲು ನಿರ್ಧರಿಸಿದ್ದಳು. ಶಾಲೋಮ್ ಶೀಬಾ ಆಗಮನವು ಮಾರಿಮುತ್ತುಗೆ ಹಿಡಿಸಲಿಲ್ಲ. ಹಾಗಾಗಿ ಮಾರಿಮುತ್ತು ಅವಳನ್ನು ಅನೇಕ ಬಾರಿ ಕೊಚ್ಚಿ ಹೋಗಿದ್ದಾನೆ ಎನ್ನುವ ಮಾಹಿತಿಯಿದೆ.