ಫೇಸ್ಬುಕ್ನಲ್ಲಿ ಪತ್ನಿಯನ್ನು ವೇಶ್ಯೆ ಎಂದು ಬಿಂಬಿಸಿ ವಿಕೃತ ಮೆರೆದ ಪತಿ...!!
Thursday, July 1, 2021
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪತ್ನಿಯನ್ನೇ ವೇಶ್ಯೆ ಎಂದು ಬಿಂಬಿಸಿ ವಿಕೃತಿ ಮೆರೆದಿರುವ ಪತಿ ವಿರುದ್ಧ ಪತ್ನಿ ಪುಲಕೇಶಿ ನಗರದಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಕೃತಿ ಮೆರೆದಿರುವ ಪತಿಯ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾಳೆ.
ಇಂದಿರಾನಗರದ ನಿವಾಸಿ 25 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಪತಿ ಜಯಶಂಕರ್ ಕುಮಾರ್ ಸಿಂಗ್ (29) ವಿರುದ್ಧ ಪ್ರಕರಣ ದಾಖಲಾಗಿದೆ.ಜಯಶಂಕರ್ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಪತ್ನಿಯನ್ನು ಅನುಮಾನದಿಂದಲೇ ನೋಡುತ್ತಿದ್ದ ಜಯಶಂಕರ್ ಆಕೆ ಯಾರೊಂದಿಗೂ ಮಾತನಾಡಬಾರದು ಎಂದು ತಾಕೀತು ಮಾಡಿ ಆಕೆಗೆ ಅವಾಚ್ಯ ಪದಗಳಿಂದ ನಿಂದಿಸಿದ ಮೇಲೆ ಹಲ್ಲೆ ನಡೆಸುತ್ತಿದ್ದ.
ಪತಿಯ ಹಿಂಸೆ ತಾಳಲಾರದೆ ಆಕೆ ಮನೆ ತೊರೆದು ಪ್ರತ್ಯೇಕವಾಗಿ ಪಿಜಿಯಲ್ಲಿ ವಾಸವಿದ್ದಳು. ಮನೆ ಬಿಟ್ಟು ಬಂದರೂ ಸುಮ್ಮನಾಗದ ಪತಿ ಆಕೆಯ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಎಸ್ಕಾರ್ಟ್ ಸರ್ವೀಸ್ ಎಂದು ಹೆಂಡತಿಯ ಮೊಬೈಲ್ ನಂಬರ್ ಹಾಕಿ ವಿಕೃತಿ ಮೆರೆದಿದ್ದಾನೆ. ಪತಿಯ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಪುಲಕೇಶಿನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.