ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಪತ್ನಿಯನ್ನ ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿದ ಪತಿರಾಯ..!!


ಸರಣ್(ಬಿಹಾರ) : ಪತ್ನಿಯನ್ನ ಆಕೆಯ ಪ್ರಿಯಕರನ ಜೊತೆ ಪತಿಯೇ ವಿವಾಹ ಮಾಡಿಸಿರುವ ಘಟನೆೆ ಬಿಹಾರದ ಸರಣ್ ಜಿಲ್ಲೆಯ ಛಾಪ್ರಾ ಗ್ರಾಮದಲ್ಲಿ  ನಡೆದಿದೆ.

ಈ ಜೋಡಿಯ ವಿವಾಹದ ವಿಡಿಯೋ ಈಗ ವೈರಲ್ ಆಗುತ್ತಿದೆ. ವಿವಾಹವಾಗಿ ಒಂದು ಮಗು ಪಡೆದಿದ್ದ ಜೋಡಿಯು ಈಗ ಬೇರೆಯಾಗುವ ನಿರ್ಧಾರ ಮಾಡಿದ್ದಾರೆ.

ವಿವಾಹವಾದ 6 ತಿಂಗಳಿನಿಂದ ಪತ್ನಿ ಬೇರೆ ಯುವಕನ್ನು ಪ್ರೀತಿಸುತ್ತಿದ್ದಳು. ಆತನಿಗೂ ಕೂಡ ಬೇರೆಂದು ಮದುವೆಯಾಗಿದ್ದರೂ ಈಕೆಯ ಹಿಂದೆ ಬಿದ್ದಿದ್ದ ಇದನ್ನು  ತಿಳಿದ ಪತಿ ಇವರಿಬ್ಬರಿಗೂ ಮದುವೆ ಮಾಡಿಸಿದ್ದಾನೆ. 

ಈ ವಿವಾಹಕ್ಕೆ ಇಬ್ಬರ ಕಡೆಯಿಂದಲೂ ಸಮ್ಮತಿ ಇದ್ದು, ಸಂತೋಷದಿಂದಲೇ ಆತನ ಕೈಹಿಡಿಯುತ್ತಿರುವುದಾಗಿ ಪತ್ನಿ ಹೇಳಿದ್ದಾಳೆ. ಆದರೆ, ಪತಿ ವಿರುದ್ಧ ಕಿರುಕುಳ ಆರೋಪ ಮಾಡಿರುವ ಪತ್ನಿ, ನನಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಹೀಗಾಗಿ, ಬೇರೆಯಾಗುತ್ತಿದ್ದೇನೆ ಎಂದಿದ್ದಾಳೆ. ಈ ನಡುವೆ ಮಗುವನ್ನು ತಾನೇ ನೋಡಿಕೊಳ್ಳುವುದಾಗಿ ಪತಿ ಹೇಳಿದ್ದು, ನಾನು ಸಹ ಬೇರೊಂದು ಮಹಿಳೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ.

ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW