-->

ಚಿಕನ್ ಸೂಪ್ ಬಾಣಲೆಗೆ ಬಿದ್ದು ಬೆಂದುಹೋದ ಸುಪ್ರಸಿದ್ದ ಬಾಣಸಿಗ

ಚಿಕನ್ ಸೂಪ್ ಬಾಣಲೆಗೆ ಬಿದ್ದು ಬೆಂದುಹೋದ ಸುಪ್ರಸಿದ್ದ ಬಾಣಸಿಗ

ಇರಾಕ್: ಪ್ರಸಿದ್ಧ ಬಾಣಸಿಗನೊಬ್ಬ ಔತಣಕೂಟವೊಂದರಲ್ಲಿ ಚಿಕನ್‌ ಸೂಪ್‌ ತಯಾರಿಸುತ್ತಿದ್ದಾಗ ಬಾಣಲೆಗೆ ಬಿದ್ದು ಸಂಪೂರ್ಣ ಬೆಂದು ಮೃತಪಟ್ಡ ಭಯಾನಕ ಘಟನೆ ಇರಾಕ್‌ನಲ್ಲಿ ನಡೆದಿದೆ.

ಮೃತಪಟ್ಟ ದುರ್ದೈವಿ ಪ್ರಸಿದ್ಧ ಬಾಣಸಿಗ ಇಸ್ಸಾ ಇಸ್ಮಾಯಿಲ್.  

ಇರಾಕ್ ದೇಶದ ಜಾಕೋ ನಗರದಲ್ಲಿ ನಡೆದ ಅದ್ಧೂರಿ ಮದುವೆ ಸಮಾರಂಭವೊಂದರಲ್ಲಿ ಈ ದುರಂತ ನಡೆದಿದೆ. ಮದುವೆ ಸಮಾರಂಭದಲ್ಲಿ ಔತಣಕೂಟ ಏರ್ಪಡಿಸಲಾಗಿದ್ದು, ಬಾಣಸಿಗರ ಬೃಹತ್‌ ಗುಂಪೇ ವಿವಿಧ ಖಾದ್ಯಗಳನ್ನು ತಯಾರಿಸುತ್ತಿತ್ತು.  ಆ ಸಂದರ್ಭ ಇದ್ದಕ್ಕಿದ್ದಂತೆ ಬಾಣಸಿಗ ಇಸ್ಸಾ ಇಸ್ಮಾಯಿಲ್ ಕಾಲುಜಾರಿ ಬಾಣಲೆಯಲ್ಲಿ ಬಿದ್ದುಬಿಟ್ಟಿದ್ದಾರೆ. ಬಾಣಲೆ ಬಹಳಷ್ಟು ಬಿಸಿಯಾಗಿದ್ದ ಪರಿಣಾಮ ಬಾಣಸಿಗ ಇಸ್ಸಾ ಇಸ್ಮಾಯಿಲ್ ಅದರಲ್ಲಿಯೇ ಬೆಂದುಹೋಗಿದ್ದಾರೆ.

ಕೂಡಲೇ ಅವರನ್ನು‌ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದರು. 25 ವರ್ಷಗಳಿಂದ ಬಾಣಸಿಗ ವೃತ್ತಿಯಲ್ಲಿದ್ದ ಇಸ್ಸಾ ಇಸ್ಮಾಯಿಲ್ ಈ ಪ್ರದೇಶದಲ್ಲಿ ಬಾಣಸಿಗನಾಗಿ ಭಾರಿ ಖ್ಯಾತಿ ಗಳಿಸಿದವರಾಗಿದವರಂತೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99