ಅಪ್ರಾಪ್ತೆಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಗ್ರಾ.ಪಂ ಸದಸ್ಯ ಅಂದರ್.. ಆತ ಕಳುಹಿಸುತ್ತಿದ್ದ ಮೆಸೇಜ್ ಅಲ್ಲಿ ಏನೇನಿತ್ತು...
Wednesday, July 14, 2021
ಗುಡಿಬಂಡೆ(ಚಿಕ್ಕಬಳ್ಳಾಪುರ) : ಅಪ್ರಾಪ್ತೆಗೆ ವಾಟ್ಸ್ಆ್ಯಪ್ನಲ್ಲಿ ಅಶ್ಲೀಲ ಸಂದೇಶ, ಫೋಟೋಗಳನ್ನು ರವಾನಿಸಿದ ಆರೋಪದಲ್ಲಿ ಚಿಕ್ಕಬಳ್ಳಾಪುರ ತಾಲೂಕು ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಆತನ ಸ್ನೇಹಿತನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಮ್ಮಗುಟ್ಟಹಳ್ಳಿಯ ಗ್ರಾಪಂ ಸದಸ್ಯ ರಾಮಪಟ್ನ ಗ್ರಾಮದ ಶ್ರೀನಿವಾಸ ಮತ್ತು ಆತನ ಸ್ನೇಹಿತ ಕೇಶವ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಾಲಕಿಯ ತಾಯಿ ಮಗಳಿಗೆ ಆನ್ಲೈನ್ ತರಗತಿಗೆ ಉಪಯೋಗಿಸಲು ಮೊಬೈಲ್ ನೀಡಿದ್ದರು. ಗ್ರಾಪಂ ಸದಸ್ಯ ಶ್ರೀನಿವಾಸ್ ಕೆನರಾ ಬ್ಯಾಂಕ್ನ ʼಬ್ಯಾಂಕ್ ಮಿತ್ರʼ ಕೆಲಸ ಕೂಡ ಮಾಡುತ್ತಿದ್ದ. ಬಾಲಕಿಯ ಖಾತೆಗೆ ಸರ್ಕಾರದಿಂದ ಪ್ರೋತ್ಸಾಹ ಹಣ ವರ್ಗಾವಣೆ ಆಗಿತ್ತು. ಆ ಹಣವನ್ನು ಡ್ರಾ ಮಾಡಲು ಆರೋಪಿ ಆಕೆಯ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಪಡೆದುಕೊಂಡಿದ್ದ. ನಂತರ ಬಾಲಕಿಯ ಮೊಬೈಲ್ಗೆ ಅಶ್ಲೀಲ ಸಂದೇಶ, ಫೋಟೋ ಮತ್ತು ವಾಯ್ಸ್ ಮೆಸೇಜ್ಗಳನ್ನು ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಬಾಲಕಿಯ ಆನ್ಲೈನ್ ತರಗತಿಗೆ ತೊಂದರೆಯಾಗುತ್ತಿತ್ತು.
ಇವರಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ಕೇಸು ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.