-->

ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಪೊಲೀಸರೊಂದಿಗೆ‌ ಬೀದಿರಂಪಾಟ ಮಾಡಿದ ಮಹಿಳೆ !

ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಪೊಲೀಸರೊಂದಿಗೆ‌ ಬೀದಿರಂಪಾಟ ಮಾಡಿದ ಮಹಿಳೆ !

ಬೆಂಗಳೂರು: ಕುಡಿದ ಮತ್ತಿನಲ್ಲಿ ಮಹಿಳೆಯೋರ್ವರು ನಡುರೋಡಿನಲ್ಲಿಯೇ ಬೀದಿರಂಪಾಟ ಮಾಡಿರುವ ಘಟನೆ ಬೆಂಗಳೂರಿನ ಕಬ್ಬನ್​ಪಾರ್ಕ್​ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಮದ್ಯ ಸೇವನೆ ಮಾಡಿ ಬೈಕ್ ಸವಾರಿ ಮಾಡುತ್ತಿದ್ದ ಮಹಿಳೆಯನ್ನು ತಡೆದು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಸುಮಾರು 3ತಾಸುಗಳ ವರೆಗೆ ಕಾಲ ನಡುಬೀದಿಯಲ್ಲೇ ರಂಪಾಟ ಮಾಡಿದ್ದಾಳೆ. 

ಬಳಿಕ ಸ್ಥಳಕ್ಕೆ ಎಸ್​ಪಿ ಬರಬೇಕೆಂದು ಹಠ ಹಿಡಿದಿದ್ದು, ಬುದ್ಧಿ ಹೇಳಲು ಬಂದ ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ. ಹಾಗಾಗಿ, ಪೊಲೀಸರು, ಬೈಕ್​ ಜಪ್ತಿ ಮಾಡಿ ಮಹಿಳೆಯನ್ನು ಆಟೋದಲ್ಲಿ ಕಳಿಸಿಕೊಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99