Header Ad

Mangaluru-ಅಜ್ಜನೊಂದಿಗೆ ಅಂಗಡಿಗೆ ಬಂದ ಮಗು ಕಾರು ಡಿಕ್ಕಿಯಾಗಿ ಮೃತ್ಯು

ಮಂಗಳೂರು: ಅಜ್ಜನೊಂದಿಗೆ ಅಂಗಡಿಗೆ ಬಂದಿರುವ 5ರ ಹರೆಹಯದ ಮಗುವೊಂದು ರಸ್ತೆ ದಾಟುತ್ತಿದ್ದ ಸಂದರ್ಭ ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆ ಮೂಡುಬಿದಿರೆ ತಾಲೂಕಿನ ತೋಡಾರು ಸಮೀಪದ ಹಂಡೇಲು ಎಂಬಲ್ಲಿ ನಡೆದಿದೆ.

ಪ್ರಸ್ತುತ ವಿದೇಶದಲ್ಲಿರುವ ಹಂಡೇಲಿನ ಅಬುಸ್ವಾಲಿಹ್ ಎಂಬವರ ಪುತ್ರಿ ಅಜ್ಮಾ ಫಾತಿಮಾ ಮೃತಪಟ್ಟ ಮಗು.

ಅಜ್ಮಾ ಫಾತಿಮಾ ಹಾಗೂ ಆ ಮಗುವಿನ ಅವಳಿ ಸಹೋದರಿ ಅವರ ಅಜ್ಜನೊಂದಿಗೆ ಅಂಗಡಿಗೆ ಬಂದಿದ್ದರು. ಬಳಿಕ ವಾಪಸ್ ಮನೆಗೆ ತೆರಳುವ ಸಂದರ್ಭ ಹಂಡೇಲು ದೇವಿನಗರ ಕ್ರಾಸ್ ಬಳಿ ಅಜ್ಮಾ ಅಜ್ಜನ‌ ಕೈಬಿಡಿಸಿಕೊಂಡು ರಸ್ತೆ ದಾಟಿದ್ದಾಳೆ. ಈ ಸಂದರ್ಭ ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮಗು ಅಜ್ಮಾಳನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ದಾರಿ ಮಧ್ಯೆ ಮಗು ಮೃತಪಟ್ಟಿದೆ. ಈ ಬಗ್ಗೆ ಮೂಡುಬಿದಿರೆ  ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳು