
ಮದುವೆಯಾಗಿದ್ದರೂ ಕೂಡ ಇನ್ನೊಬ್ಬರನ್ನು ಪ್ರೀತಿಸಿ ಮನೆ ಬಿಟ್ಟು ಬಂದವರು ಮುಂದೆ ಸೇರಿದ್ದು..!!?
Wednesday, July 14, 2021
ಕೊಡಗು: ಇವರಿಬ್ಬರಿಗೂ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಕೂಡ ಇನ್ನೊಬ್ಬರನ್ನು ಪ್ರೀತಿಸುತ್ತಿದ್ದರು ಅದಕ್ಕಾಗಿ ಮನೆ ಬಿಟ್ಟು ಬೇರೆ ವಾಸವಿರಲು ಬಂದವರು ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಿರಿಯಾಪಟ್ಟಣ ಚಿಕ್ಕನೇರಳೆ ಗ್ರಾಮದ ವಿದ್ಯಾ (29) ಮತ್ತು ಅದೇ ತಾಲೂಕಿನ ಕಣಗಾಲು ಗ್ರಾಮದ ವಿಶ್ವನಾಥ್ (35). ಇಬ್ಬರಿಗೂ ಬೇರೆ ವಿವಾಹವಾಗಿದ್ದು, ಇಬ್ಬಿಬ್ಬರು ಮಕ್ಕಳಿದ್ದಾರೆ. ಪ್ರೀತಿಸುತ್ತಿದ್ದ ಇವರು ಮನೆ ಬಿಟ್ಟು ಬಂದಿದ್ದು ಕೊಡಗು ಜಿಲ್ಲೆಯ ಕುಶಾಲನಗರದ ಹೆಬ್ಬಾಲೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಒಂದು ತಿಂಗಳಿನಿಂದ ಇಲ್ಲಿ ವಾಸವಿದ್ದ ಇವರು ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶ್ವನಾಥ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.