
ವಿಚ್ಛೇದನದ ಬಳಿಕ ಅಮೀರ್ ಖಾನ್ ತನ್ನ ಎರಡನೇ ಹೆಂಡತಿ ಕಿರಣ್ ರಾವ್ ಕೈಹಿಡಿದು ಹೇಳಿದ್ದೇನು ಗೊತ್ತಾ?
ಬೆಂಗಳೂರು: ಬಾಲಿವುಡ್ ಖ್ಯಾತನಟ ಆಮೀರ್ ಖಾನ್-ಕಿರಣ್ ರಾವ್ ಇಬ್ಬರೂ ವಿಚ್ಛೇದನ ಗೊಂಡಿದ್ದು ಆಮೀರ್ ಖಾನ್ ತಮ್ಮ ಮಾಜಿ ಪತ್ನಿಯ ಕೈಹಿಡಿದುಕೊಂಡು ತಮ್ಮ ಬಗ್ಗೆ ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ವಿಚ್ಛೇದನದ ಬಳಿಕವೂ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡ ಇಬ್ಬರೂ ತಮ್ಮ ಕುರಿತು ಜನರಿಗೆ ಇರುವ ಅಭಿಪ್ರಾಯದ ಕುರಿತು ಹೇಳಿಕೊಂಡಿದ್ದಾರೆ. ನಮ್ಮಿಬ್ಬರ ನಿರ್ಧಾರದಿಂದ ಕೆಲವರಿಗೆ ಬೇಸರವಾಗಿರಬಹುದು, ಶಾಕ್ ಆಗಿರಬಹುದು, ಆದರೆ ನಾವಿಬ್ಬರೂ ಸಂತೋಷವಾಗಿದ್ದೇವೆ ಎಂದು ನಿಮಗೆ ಹೇಳುತ್ತಿದ್ದೇವೆ. ನಮ್ಮ ಸಂಬಂಧದ ಸ್ಥಿತಿಯಲ್ಲಿ ಬದಲಾವಣೆ ಆಗಿರಬಹುದು, ಆದರೆ ನಾವಿಬ್ಬರೂ ಇನ್ನೂ ಕುಟುಂಬದ ರೀತಿಯಲ್ಲೇ ಇರುತ್ತೇವೆ. ಇಬ್ಬರ ಸಂತೋಷ ಹೀಗೇ ಉಳಿಯಲಿ ಎಂದು ಪ್ರಾರ್ಥಿಸಿಕೊಳ್ಳಿ ಎಂದು ಕಿರಣ್ ರಾವ್ ಕೈ ಹಿಡಿದು ಆಮೀರ್ ಖಾನ್ ಹೇಳಿಕೊಂಡಿದ್ದಾರೆ.