ಮಡದಿಯ ಸಂಕಷ್ಟಕ್ಕೆ ಮಿಡಿದು ಪತಿಯೊಬ್ಬ ನೀಡಿದ್ದು ಅಸಾಮಾನ್ಯ ಉಡುಗೊರೆ: ಮಹಿಳಾ ನೆಟ್ಟಿಗರಿಂದ ಭರಪೂರ ಪ್ರಶಂಸೆ- Video
Monday, July 5, 2021
ಪಾಟ್ನಾ: ಮಡದಿಗೆ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಸಮಯದಲ್ಲಿ ಪತಿಯೊಬ್ಬ ಉಡುಗೊರೆ ನೀಡೋದು ಸಹಜ. ಆದರೆ ಇಲ್ಲೊಬ್ಬರು ಯಾರೂ ಕಂಡು ಕೇಳರಿಯದ ಉಡುಗೊರೆಯನ್ನು ನೀಡಿದ್ದಾರೆ. ಇವರು ನೀಡಿರುವ ಉಡುಗೊರೆ ಯಾವುದೆಂದು ಕೇಳಿದರೆ ಎಲ್ಲರೂ ಅಚ್ಚರಿ ಪಡುತ್ತಾರೆ. ಹಾಗಾದರೆ ಆ ಉಡುಗೊರೆ ಯಾವುದು ಅಂತೀರಾ?. ಹಾಗಾದರೆ ಈ ಸುದ್ದಿ ನೋಡಿ
ಬಿಹಾರದ ಮೆಕ್ಯಾನಿಕಲ್ ಇಂಜಿನಿಯರ್ ಅನುಜ್ ಕುಮಾರ್ ಅವರು ತಮ್ಮ ಪತ್ನಿಗೆ ಉಡುಗೊರೆಯಾಗಿ ನೀಡಿದ್ದು ಲಿಫ್ಟ್.
ಅವರದ್ದು ಚಿಕ್ಕ ಮನೆಯಾಗಿದ್ದು ಆದ್ದರಿಂದ ಅಡುಗೆ ಮನೆ ಮೊದಲ ಮಹಡಿಯಲ್ಲಿ ಮಾಡಲಾಗಿದೆಯಂತೆ. ಗ್ರೌಂಡ್ ಫ್ಲೋರ್ ನಲ್ಲಿ ವಿಸ್ತಾರವಾದ ಹಾಲ್ ಇದೆ. ಯಾರೇ ಬಂದರೂ ಅಲ್ಲಿಯೇ ಊಟ-ಉಪಚಾರ ಮಾಡುವುದಂತೆ. ಆದ್ದರಿಂದ ಕೆಳಗೂ ಮೇಲೂ ಓಡಾಡುವುದರಿಂದ ಪತ್ನಿಗೆ ಸುಸ್ತಾಗುತ್ತಿತ್ತು. ಒಮ್ಮೆ ಮನೆಗೆ ಅತಿಥಿಗಳು ಬಂದಾಗ ಪತ್ನಿ ಕೆಳಗೆ, ಮೇಲೆ ಹತ್ತಿ ಇಳಿದು ಜಾರಿ ಬಿದ್ದು ಆಸ್ಪತ್ರೆ ಸೇರುವಂತಾಗಿತ್ತಂತೆ. ಹಾಗಾಗಿ ಆಕೆಯ ಶ್ರಮ ಕಡಿಮೆ ಮಾಡುವ ಉದ್ದೇಶದಿಂದ ಪುಟ್ಟ ಲಿಫ್ಟ್ ನಿರ್ಮಿಸುವ ಆಲೋಚನೆ ಬಂತಂತೆ. ಈ ಪುಟ್ಟ ಲಿಫ್ಟ್ ಮೂಲಕ ಕಿಚನ್ ನಿಂದ ನೇರವಾಗಿ ಡೈನಿಂಗ್ ಹಾಲ್ ಗೆ ಊಟ ಕಳಿಸಬಹುದಾಗಿದೆ ಎಂದಿದ್ದಾರೆ ಅನುಜ್.
ಮೆಟ್ಟಿಲು ಹತ್ತಿ ಪತ್ನಿ ಆಯಾಸವಾಗೊಳ್ಳುತ್ತಿರುವುದನ್ನು ನೋಡಲಾಗದೆ ಅನುಜ್ ಕುಮಾರ್ ಉಡುಗೊರೆ ರೂಪದಲ್ಲಿ ನೀಡಿರುವ ಲಿಫ್ಟ್ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಪತ್ನಿಯ ಸ್ನೇಹಿತೆಯರು ಮಾತ್ರವಲ್ಲದೇ ಅಕ್ಕಪಕ್ಕದ ಮನೆಯವರೂ ಈ ಇಂಜಿನಿಯರ್ ಮನೆಗೆ ದೌಡಾಯಿಸಿದ್ದಾರಂತೆ. ಅಲ್ಲದೆ ಈ ಲಿಫ್ಟ್ ಸುದ್ದಿ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತುದ್ದು, ಪತ್ನಿಯ ಸಂಕಷ್ಟಕ್ಕೆ ಮನ ಮಿಡಿದಿರುವ ಈತನೇ ನಿಜವಾದ ಹೀರೋ ಎಂದಿದ್ದಾರೆ ಎಂದು ಕೆಲ ಮಹಿಳಾ ನೆಟ್ಟಿಗರು ಪ್ರಶಂಶೆ ವ್ಯಕ್ತಪಡಿಸುತ್ತಿದ್ದಾರಂತೆ.