ಈ ಮಹಿಳಾ ಜೈಲು ಅಧಿಕಾರಿಯಿಂದ ಖೈದಿ ಜೊತೆಗೆ ಕಾಮದಾಟ- ಮುಂದೇನಾಯಿತೆಂದರೆ.....
Monday, July 5, 2021
ಕ್ಯಾಲಿಫೋರ್ನಿಯಾ(ಅಮೆರಿಕ): ಕ್ಯಾಲಿಫೋರ್ನಿಯಾದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕೈದಿ ಜೊತೆ ಲೈಂಗಿಕ ಕ್ರಿಯೆ ನಡೆಸಿ 7 ತಿಂಗಳುಗಳ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ.
ಪ್ರೆಸ್ನೊ ಕೌಂಟಿ ಠಾಣೆಯ ಕರೆಕ್ಷನ್ ಅಧಿಕಾರಿ ಟೀನಾ ಗೊನ್ಜಾಲೆಜ್(26) ಎಂಬುವರು ಕೈದಿ ಜೊತೆ ಲೈಂಗಿಕ ಕ್ರಿಯೆ ನಡೆಸಿ 7 ತಿಂಗಳುಗಳ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. ಆತನೊಂದಿಗೆ ಲೈಂಗಿಕ ಸಂಪರ್ಕ ನಡೆಸಲು ತನ್ನ ಪ್ಯಾಂಟ್ ಅನ್ನೇ ಕತ್ತರಿಸಿಕೊಂಡಿದ್ದಾಳೆ ಎಂದು ವರದಿಯಾಗಿದೆ. 2016ರಿಂದ ಕೌಂಟಿ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟೀನಾ, ಬೇಕಿನಿಸಿದಾಗಲೆಲ್ಲಾ ಜೈಲಿನಲ್ಲಿ ಕೈದಿಗಳ ಜೊತೆ ಅಶ್ಲೀಲವಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ ಎನ್ನಲಾಗ್ತಿದೆ. ಅವಳು ಕೈದಿಗಳಿಗೆ ಮೊಬೈಲ್ ಫೋನ್ ಮತ್ತು ರೇಜರ್ಗಳನ್ನು ಸರಬರಾಜು ಮಾಡಿದ್ದಳು ಎನ್ನಲಾಗ್ತಿದೆ. ತಾನು ಮಾಡಿದ ಅಪರಾಧಗಳ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಆಕೆಯ ವರ್ತನೆಯ ಬಗ್ಗೆ ಕೇಳಿ ನ್ಯಾಯಾಧೀಶರು ನೀವು ಬಹಳ ಕೆಟ್ಟದಾಗಿ ವರ್ತಿಸಿದ್ದೀರಿ ಎಂದಿದ್ದಾರೆ.