ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಭೂಪ.. ಪ್ರೀತಿಸುವ ನಾಟಕವಾಡಿ ಮಾಡಿದ್ದು ಎಂತಹ ನೀಚ ಕೃತ್ಯ ಗೊತ್ತಾ..??
Monday, July 5, 2021
ಬೆಂಗಳೂರು : ಇನ್ಸ್ಟ್ರಾಗಾಮ್ನಲ್ಲಿ ಪರಿಚಯವದಾತ ಬಾಲಕಿಯನ್ನು ಪ್ರೀತಿಸುವಂತೆ ನಾಟಕವಾಡಿ ನಂತರ ಆತನ ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ದರ್ಶನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೋಷಕರು ಬಾಲಕಿಗೆ ಆನ್ಲೈನ್ ಕ್ಲಾಸ್ ಹಾಜರಾಗಲು ಸ್ಮಾರ್ಟ್ಫೋನ್ ತೆಗೆದುಕೊಟ್ಟರೆ ಆಕೆ ಇನ್ಸ್ಟಾಗ್ರಾಂ ನಲ್ಲಿ ಅಕೌಂಟ್ ಓಪನ್ ಮಾಡಿದಳು.ದರ್ಶನ್ ಎಂಬಾತ ಈಕೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರಿಂದ ಆಕೆ ಅಕ್ಸೆಪ್ಟ್ ಮಾಡಿಕೊಂಡಿದ್ದಳು
ಇದಾದ ನಂತರ ಅಪ್ರಾಪ್ತ ಯುವತಿಯನ್ನು ಪ್ರೀತಿಸುವುದಾಗಿ ದರ್ಶನ್ ನಂಬಿಸಿದ್ದಾನೆ. ಆಕೆಯನ್ನು ಗೆಳೆಯನ ಮನೆಗೆ ಕರೆದೊಯ್ದು, ಗೆಳೆಯನ ಮನೆಯಲ್ಲೇ ಒಂದು ದಿನ ಇಟ್ಟುಕೊಂಡು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಮೆಡಿಕಲ್ ಶಾಪ್ ಗೆ ಹೋಗಿ ಬರುತ್ತೇನೆ ಎದ ಮಗಳು ಮನೆಗೆ ಬರಲಿಲ್ಲ ಎಂದು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ನಂತರ ಮನೆಗೆ ಬಂದಿದ್ದ ಯುವತಿ ಪೋಷಕರ ಬಳಿ ನಡೆದ ಘಟನೆಯನ್ನ ವಿವರಿಸಿದ್ದಾಳೆ. ಆರೋಪಿಯನ್ನ ಬಂಧಿಸಿರುವ ಹನುಮಂತನಗರ ಪೊಲೀಸರು ಆತನನ್ನು ಜೈಲಿಗಟ್ಟಿದ್ದಾರೆ.