
ಸ್ವಂತ ಮಗನ ಹೆಂಡತಿಯನ್ನೇ ಮದುವೆಯಾದ ಅಪ್ಪ..ಏನ್ ಕಾಲ ಬಂತಪ್ಪ..??
Sunday, July 4, 2021
ಉತ್ತರ ಪ್ರದೇಶ: ಮಗನ ಹೆಂಡತಿಯನ್ನೇ ತಂದೆ ಮದುವೆಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಯುವಕನೊಬ್ಬ 2016ರಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದ, ಆದರೆ ಆಗ ಇಬ್ಬರು ಅಪ್ರಾಪ್ತ ರಾಗಿದ್ದರು ಅಷ್ಟೇ ಅಲ್ಲದೆ ಗಂಡ ಮಧ್ಯಪಾನ ಮಾಡುತ್ತಾನೆ ಎಂದು ಯುವತಿ ಆತನನ್ನು ಬಿಟ್ಟು ಹೋಗಿದ್ದಳು.ಅದರ ಬಳಿಕ ಹಳೆ ವಿಚಾರವನ್ನೇ ಮರೆತು 48 ವರ್ಷದ ಆತನ ಅಪ್ಪನೊಂದಿಗೇ ಆ ಯುವತಿ ಮದುವೆಯಾಗಿದ್ದಾಳೆ.
ತನನ್ನು ಮದುವೆಯಾಗಿ ಕೈ ಕೊಟ್ಟಿದ್ದ ಯುವತಿಯನ್ನೇ ಅಪ್ಪ ಮದುವೆಯಾಗಿರುವುದಾಗಿ ಆತನಿಗೆ ಗೊತ್ತಾಗಿದ್ದು, ಇದರಿಂದ ಶಾಕ್ ಆದ ಯುವಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಆದರೆ ನಾನು ಮೊದಲ ಮದುವೆಯಾಗುವಾಗ ಅಪ್ರಾಪ್ತಳಾಗಿದ್ದರಿಂದಾಗಿ ಆ ಮದುವೆ ಅಸಿಂಧು ಆಗಿದ್ದು, ಈಗ ಎರಡನೇ ಗಂಡನೊಂದಿಗೆ ಸಂತೋಷದಿಂದ ಇದ್ದೇನೆ. ಎಂದು ಯುವತಿ ಹೇಳಿದ್ದಾಳೆ.