
ತಾಯಿಯೇ ತನ್ನ ಮಗಳನ್ನು ಅತ್ಯಾಚಾರಕ್ಕೆ ದೂಡಿದ್ದ ಪ್ರಕರಣ- 30 ಚಾರ್ಜ್ ಶೀಟ್ ಸಲ್ಲಿಕೆ
Sunday, July 4, 2021
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಅಪ್ರಾಪ್ತೆ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಕಳೆದ 5 ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಸ್ವಂತ ತಾಯಿಯೇ ತನ್ನ ಅಪ್ರಾಪ್ತ ಮಗಳನ್ನು ಅತ್ಯಾಚಾರಕ್ಕೆ ದೂಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಇದುವರೆಗೆ 42 ಮಂದಿ ಬಂಧನವಾಗಿದ್ದು ಇನ್ನು ಹಲವರ ಬಂಧನ ಸಾಧ್ಯತೆ ಇದೆ. ಪ್ರಕರಣ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಪೊಲೀಸರು, ಅತ್ಯಾಚಾರವಾಗಿರೋ ಸ್ಥಳ, ಆರೋಪಿಗಳ ಬಗ್ಗೆ ಸಾಕ್ಷ್ಯ ಹಾಗೂ ಅಪ್ರಾಪ್ತೆ ತಾಯಿಯ ಅಕೌಂಟ್ ಗೆ ಹಣ ವರ್ಗಾವಣೆಯಾಗಿರೋ ಬಗ್ಗೆ ಡಿಟೇಲ್ಸ್ ಸಂಗ್ರಹಿಸಲಾಗಿದೆ.
5 ತಿಂಗಳಿನಲ್ಲಿ 42 ಮಂದಿ ಬಂಧನವಾಗಿದ್ದು, ಅತೀ ಹೆಚ್ಚು ಚಾರ್ಜ್ ಶೀಟ್ ಸಲ್ಲಿಕೆಯಾದ ಪ್ರಕರಣ ಇದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಉಳಿದ ಆರೋಪಿಗಳಾಗಿ ಪೊಲೀಸರು ಬೆನ್ನು ಹತ್ತಿದ್ದಾರೆ. ಚಿಕ್ಕಮಗಳೂರಿನ ವಿಶೇಷ ಪೋಕ್ಸೋ ಕೋರ್ಟ್ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.