
ಗೆಳತಿ ಅಂಜುಂ ಖಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಿವಂ ದುಬೆ....
Saturday, July 17, 2021
ಮುಂಬೈ: ಟೀಮ್ ಇಂಡಿಯಾ ಪರ ಆಡಿರುವ ಮುಂಬೈ ಆಲ್ರೌಂಡರ್ ಶಿವಂ ದುಬೆ ತನ್ನ ಗೆಳತಿ ಅಂಜುಂ ಖಾನ್ ಅವರನ್ನು ವಿವಾಹವಾದರು.
ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಚಿತ್ರ ಸಹಿತ ಪ್ರಕಟಿಸಿದ್ದಾರೆ. ‘ಪ್ರೀತಿಗಿಂತಲೂ ಹೆಚ್ಚಾಗಿರುವುದನ್ನು ನಾವು ಪ್ರೀತಿಯಿಂದ ಪ್ರೀತಿಸಿದೆವು. .. ಮತ್ತು ಈಗ ನಮ್ಮ ಎಂದೆಂದಿಗೂ ಮುಗಿಯದ ಸಂಬಂಧಕ್ಕೆ ಅಧಿಕೃತ ಆರಂಭ ದೊರೆತಿದೆ. ಜಸ್ಟ್ ಮ್ಯಾರೀಡ್…. 16-07-2021’ ಎಂದು ಶಿವಂ ದುಬೆ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಶಿವಂ ದುಬೆ ಭಾರತ ಪರ ಇದುವರೆಗೆ ಒಂದು ಏಕದಿನ ಪಂದ್ಯ ಮತ್ತು 13 ಟಿ20 ಪಂದ್ಯಗಳನ್ನು ಇವರು ಆಡಿದ್ದಾರೆ. ಅದಕ್ಕೂ ಮುನ್ನ ಮುನ್ನ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಆಟಗಾರರೂ ಆಗಿದ್ದರು. ಸದ್ಯ ಇವರು ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯರಾಗಿದ್ದಾರೆ.