-->
ads hereindex.jpg
ಭೂಗತಳಾಗಿದ್ದ ಮಂದಾಕಿನಿ ಎಂಬ ಚೆಲುವೆ ಮತ್ತೆ ಸಿನಿಎಂಟ್ರಿಗೆ ತಯಾರಿ..

ಭೂಗತಳಾಗಿದ್ದ ಮಂದಾಕಿನಿ ಎಂಬ ಚೆಲುವೆ ಮತ್ತೆ ಸಿನಿಎಂಟ್ರಿಗೆ ತಯಾರಿ..

 
ಮುಂಬೈ: 80ರ ದಶಕದ ಜನಪ್ರಿಯ ಬಾಲಿವುಡ್​ ನಟಿಯರಲ್ಲಿ ‘ರಾಮ್​ ತೇರಿ ಗಂಗಾ ಮೈಲಿ ಖ್ಯಾತಿಯ ಮಂದಾಕಿನಿ ಕೂಡ ಒಬ್ಬರು.

ಇವರು ನಟಿಸಿದ್ದು ಕೆಲವೇ ಚಿತ್ರಗಳಲ್ಲಾದರೂ, ರಾಜ್​ ಕಪೂರ್​ ಪರಿಚಯಿಸಿದ ನಾಯಕಿ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಮೊದಲಿಗೆ ಒಂದಿಷ್ಟು ಚಿತ್ರಗಳ ಮೂಲಕ ಜನಪ್ರಿಯರಾದ ಇವರು ನಂತರ ಬೇರೆಯದೇ ಕಾರಣಗಳಿಗೆ ಸುದ್ದಿಯಾದರು. ಇವರಿಗೆ ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಜತೆಗೆ ಅವರಿಗೆ ಅಫೇರ್​ ಇದೆ ಎಂಬ ಸುದ್ದಿ ಇತ್ತು. ಆದರೆ, ಅವೆಲ್ಲವನ್ನೂ ನಿರಾಕರಿಸಿದ್ದ ಮಂದಾಕಿನಿ, ಸ್ವಲ್ಪ ಕಾಲ ಭೂಗತರಾಗಿದ್ದರು.

 ಚಿತ್ರರಂಗದಿಂದ ದೂರ ಇದ್ದ ಮಂದಾಕಿನಿ, ಈಗ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರಂತೆ. ತಮ್ಮ ವಯಸ್ಸಿಗೆ ತಕ್ಕದಾದ ಪಾತ್ರಗಳನ್ನು ಮಾಡುವುದಕ್ಕೆ  ಅವಕಾಶಗಳನ್ನು ಎದುರು ನೋಡುತ್ತಿದ್ದಾರಂತೆ. ಈಗಾಗಲೇ ಹಲವು ಜನಪ್ರಿಯ ನಿರ್ದೇಶಕರನ್ನು ಅವರು ಭೇಟಿ ಮಾಡಿದ್ದು, ತಮ್ಮ ರೀಎಂಟ್ರಿಗೆ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರಂತೆ. ಅವಕಾಶ ಸಿಗುತ್ತಿದ್ದಂತೆಯೇ,  ದೊಡ್ಡ ಮಟ್ಟದಲ್ಲಿ ಚಿತ್ರರಂಗಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ. 

Ads on article

Advertise in articles 1

advertising articles 2

IMG_20220827_133242

Advertise under the article

IMG-20220907-WA0033 IMG_20220827_133242