ನಟಿ ಪ್ರಿಯಾಮಣಿ - ಮುಸ್ತಫಾ ರಾಜ್ ಮದುವೆ ಅಸಿಂಧು: ಕೋರ್ಟ್ ಮೆಟ್ಟಿಲೇರಿದ ಮೊದಲ ಪತ್ನಿ ..
Friday, July 23, 2021
ನವದೆಹಲಿ: ನಟಿ ಪ್ರಿಯಾಮಣಿ ಹಾಗೂ ಮುಸ್ತಫಾ ರಾಜ್ ಅವರ ಮದುವೆ ವಿಚಾರ ಈಗ ಕೊರ್ಟ್ ಮೆಟ್ಟಿಲೇರಿದೆ.
ಮುಸ್ತಫಾ ರಾಜ್ ಮೊದಲ ಪತ್ನಿ ಆಯೇಷಾ ಇದೀಗ ಕೋರ್ಟ್ನಲ್ಲಿ ಮುಸ್ತಾಫಾ ರಾಜ್ ಇಲ್ಲಿಯವರೆಗೂ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿಲ್ಲ ಎಂದು ಮುಸ್ತಫಾ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಾರೆ.
ಮುಸ್ತಫಾ ರಾಜ್ ಮತ್ತು ಮೊದಲ ಪತ್ನಿ ಆಯೇಷಾ 2013ರಲ್ಲಿ ಬೇರೆಯಾಗಿದ್ದಾರೆ. ನಂತರ ಮುಸ್ತಫಾ ಅವರು 2017ರಲ್ಲಿ ಪ್ರಿಯಾಮಣಿಯನ್ನು ಮದುವೆ ಆದರು. ಈ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಮುಸ್ತಫಾ, ನನ್ನ ವಿರುದ್ಧ ಕೇಳಿಬಂದಿರುವ ಆರೋಪ ಸತ್ಯಕ್ಕೆ ದೂರವಾದದ್ದು. ನನ್ನಿಂದ ಹಣ ದೋಚಲು ಆಯೇಷಾ ಈ ರೀತಿ ಹೇಳುತ್ತಿದ್ದಾಳೆ ಎಂದು ಮೊದಲ ಪತ್ನಿಯ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ನಾವಿಬ್ಬರು 2010ರಲ್ಲೇ ಬೇರೆಯಾಗಿದ್ದೇವೆ ಮತ್ತು 2013ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದೇವೆ. ನನ್ನ ಮತ್ತು ಪ್ರಿಯಾಮಣಿ ನಡುವಿನ ಮದುವೆ 2017ರಲ್ಲಿ ನಡೆದಿದೆ. ಅಲ್ಲಿಯವರೆಗೂ ಆಯೇಷಾ ಯಾಕೆ ಸುಮ್ಮನಾಗಿದ್ದರು ಎಂದು ಮುಸ್ತಫಾ ಮರಳಿ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಯೇಷಾ, ಮುಸ್ತಫಾ ಈಗಲೂ ನನ್ನ ಪತಿಯೇ. ನಮ್ಮ ಮದುವೆ ಸಂಬಂಧ ಇನ್ನು ಮುರಿದಿಲ್ಲ. ಆದರೆ, ಪ್ರಿಯಾಮಣಿ ಮತ್ತು ಮುಸ್ತಫಾ ಮದುವೆ ಅಸಿಂಧುವಾಗಿದೆ. ನಾವು ಇಲ್ಲಿಯವರೆಗೂ ಕೂಡ ವಿಚ್ಛೇದನ ಪಡೆಯಲು ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ. ಪ್ರಿಯಾಮಣಿ ಜತೆಯಲ್ಲಿ ಮದುವೆ ಆಗಬೇಕಾದರೆ ತಾನೊಬ್ಬ ಬ್ಯಾಚುಲರ್ ಎಂದು ನ್ಯಾಯಲಯಕ್ಕೆ ಸುಳ್ಳು ಹೇಳಿ ಮದುವೆ ಆಗಿದ್ದಾರೆಂದು ಆಯೇಷಾ ಸ್ಪಷ್ಟನೆ ನೀಡಿದ್ದಾರೆ.