
ಡೆಲಿವರಿ ಮಾಡುವಾಗ ಹೊಟ್ಟೆಯಲ್ಲಿ ಬಟ್ಟೆ ಬಿಟ್ಟು ವೈದ್ಯರಿಂದ ಎಡವಟ್ಟು...!!ಮುಂದಾಗಿದ್ದು ಅನಾಹುತ..
Friday, July 23, 2021
ಉತ್ತರ ಪ್ರದೇಶ: ಡೆಲವರಿ ಮಾಡುವ ಸಂದರ್ಭದಲ್ಲಿ ವೈದ್ಯರು ಮಹಿಳೆಯ ಹೊಟ್ಟೆಯಲ್ಲಿಯೇ ಟವಲ್ ಬಿಟ್ಟು ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಹಜಾರಾನಪುರದಲ್ಲಿ ನಡೆದಿದೆ.
30 ವರ್ಷದ ನೀಲಂ ಅವರು ವೈದ್ಯರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ದುರ್ದೈವಿ. ಈ ಘಟನೆ ಕಳೆದ ಜನವರಿಯಲ್ಲಿ ನಡೆದಿದೆ. ಮಹಿಳೆಗೆ ಹೊಟ್ಟೆ ನೋವು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿದಾಗ ವಿಷಯ ಬಹಿರಂಗಗೊಂಡಿದೆ.
ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಈ ಎಡವಟ್ಟು ಮಾಡಿದ್ದು, ಇದೀಗ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಆಕೆಯ ಹೊಟ್ಟೆಯಿಂದ ಬಟ್ಟೆಯನ್ನು ತೆಗೆಯಲಾಗಿದೆ. ಆದರೆ ಪರಿಸ್ಥಿತಿ ಗಂಭೀರವಾಗಿದೆ. ನಗರದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ಆಘಾತ ಕೇಂದ್ರದಲ್ಲಿ ಅವರಿಗೆಚಿಕಿತ್ಸೆ ನೀಡಲಾಗುತ್ತಿದೆ.