
ಬೆತ್ತಲೆ ವಿಡಿಯೋ ನಿರ್ಮಾಣ ಮಾಡುವ ಪತಿ ಬಂಧನ ಬಳಿಕ ಶಿಲ್ಪಾಶೆಟ್ಟಿಯ ಮೊದಲ Instagram ಪೋಸ್ಟ್ ಯಾವುದು ಗೊತ್ತಾ?
ಲೇಖಕ ಜೇಮ್ಸ್ ಥರ್ಬರ್ ಅವರ ಪುಸ್ತಕದ ಒಂದು ಪುಟವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ, ನಾವಿರಬೇಕಾದ ಸ್ಥಳದಲ್ಲೇ ನಾವಿದ್ದೇವೆ. ಏನಾಗಿದೆ ಅಥವಾ ಏನಾಗಿರಬಹುದು ಎಂದು ಆತಂಕ ಪಡುತ್ತಿಲ್ಲ. ಆದರೆ ಏನೆಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಬರೆದಿದೆ.
ನಾನು ಜೀವಂತವಾಗಿರಲು ಅದೃಷ್ಟಶಾಲಿ ಎಂದು ತಿಳಿದುಕೊಂಡು ನಾನು ದೀರ್ಘ ಉಸಿರು ತೆಗೆದುಕೊಳ್ಳುತ್ತೇನೆ. ಈ ಹಿಂದೆ ನಾನು ಅನೇಕ ಸವಾಲುಗಳನ್ನು ಎದುರಿಸಿದ್ದೇನೆ ಮತ್ತು ಭವಿಷ್ಯದಲ್ಲಿ ಸವಾಲುಗಳನ್ನು ಎದುರಿಸುತ್ತೇನೆ ಎಂಬುದನ್ನು ಹೇಳುವ ಸಾಲುಗಳನ್ನು ಪೋಸ್ಟ್ ಮಾಡಿದ್ದಾರೆ.