ಮದುವೆಯಾಗುವ ಅರ್ಜೆಂಟಲ್ಲಿ ಎಡವಟ್ಟು....ಹಾರ ಬದಲಾಯಿಸಿಕೊಳ್ಳುವಾಗ ಆಗಿದ್ದೇನು ಗೊತ್ತಾ..?
Thursday, July 1, 2021
ವಧು-ವರರು ಹಾರ ಬದಲಾಯಿಸುವಾಗ ನಾ-ಮುಂದು ತಾ-ಮುಂದು ಎಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಹಿಂದೂ ಸಂಪ್ರದಾಯದಂತೆ ವಧು ಮೊದಲು ವರನ ಕೊರಳಿಗೆ, ನಂತರ ವರ ವಧುವಿಗೆ ಮಾಲೆ ಹಾಕಬೇಕು. ಆದರೆ ಈ ಮದುವೆಯಲ್ಲಿ ವಧು ಮೊದಲು ಹಾರಹಾಕಲು ಹೋಗುತ್ತಿದ್ದಂತೆಯೇ ಅದೇ ಸಂದರ್ಭದಲ್ಲಿ ವರನೂ ಅರ್ಜೆಂಟ್ ಮಾಡಿ ಹಾರ ಹಾಕಲು ಹೋಗಿದ್ದಾನೆ. ನಂತರ ಎರಡೂ ಹಾರಗಳು ಸಿಕ್ಕಿಬಿದ್ದಿವೆ. ಇವು ವರನ ಪೇಟಕ್ಕೆ ಸಿಕ್ಕಿಕೊಂಡಿದೆ. ಇದನ್ನ ತಪ್ಪಿಸಲು ವಧು ಪ್ರಯತ್ನಿಸಿದರೂ ಸಹ ಅದು ಸಾಧ್ಯವಾಗಿಲ್ಲ. ಕೂಡಲೇ ವೇದಿಕೆ ಮೇಲೆ ಬಂದ ಇಬ್ಬರು ಪುರುಷರು ಈ ವರಮಾಲೆಯನ್ನ ಸರಿ ಮಾಡಿದ್ದಾರೆ ನಂತರ ಅವರೇ ಇಬ್ಬರಿಗೂ ಹಾರ ಹಾಕಿದ್ದಾರೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.