
ವರ್ಷಗಳ ಬಳಿಕ ಕ್ಯಾಮೆರಾ ಮುಂದೆ ಹಾಜರಾದ ಮೇಘನಾ ರಾಜ್ ಸರ್ಜಾ...
ಬೆಂಗಳೂರು: ಮೇಘನಾ ರಾಜ್ ಸರ್ಜಾ ಇದೀಗ ಮತ್ತೊಮ್ಮೆ ಕ್ಯಾಮರಾ ಮುಂದೆ ಬರಲು ಸಿದ್ಧರಾಗಿದ್ದಾರೆ.
ಮೇಘನಾ ತಮ್ಮ ಕೆಲಸಕ್ಕೆ ವಾಪಸಾಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಮಗನಿಗೆ ಒಂಬತ್ತು ತಿಂಗಳು ತುಂಬಿತು, ಅದನ್ನು ನಾನು ಕ್ಯಾಮರಾ ಮುಂದೆ ಮತ್ತೆ ನಿಲ್ಲುವ ಮೂಲಕ ಆಚರಿಸುತ್ತಿದ್ದೇನೆ ಎಂದು ಅವರು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಕ್ಯಾಮರಾ ಮುಂದೆ ನಿಂತು ಸ್ಕ್ರಿಪ್ಟ್ ಓದುತ್ತಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ಮೇಘನಾ ಸದ್ಯದಲ್ಲೇ ಸಿನಿಮಾ ಕೆಲಸಕ್ಕೆ ವಾಪಸಾಗುತ್ತಾರೆ ಎನ್ನುವ ಮಾತುಗಳು ಈ ಹಿಂದೆಯೇ ಕೇಳಿಬಂದಿತ್ತು. ಇದೀಗ ನಟಿ ತಾವೇ ಮರಳಿರುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.