
ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ನಟಿ ಕಾಜಲ್ ಅಗರ್ವಾಲ್...
Friday, July 23, 2021
ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೇ, ಪ್ರತಿ ಸಿನಿಮಾದಲ್ಲಿಯೂ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ ನಟಿ ಕಾಜಲ್ ಅಗರ್ವಾಲ್.
ಇದೀಗ ಅವರ ಸಿನಿಮಾ ಬತ್ತಳಿಕೆಗೆ ಹೊಸ ಅಸ್ತ್ರವೊಂದು ಸೇರ್ಪಡೆಯಾಗಿದೆ. ಸ್ವಾತಂತ್ರಪೂರ್ವದ ಕಥೆಯ ಭಾಗವಾಗುತ್ತಿದ್ದಾರೆ. ಆ ಚಿತ್ರದ ಹೆಸರು ‘ಕರುಂಗಾಪಿಯಂ’. ಡಿಕೆ ನಿರ್ದೇಶನದಲ್ಲಿ ಮೂಡಿಬರಲಿರುವ ಈ ತಮಿಳು ಚಿತ್ರದಲ್ಲಿ 1940ರ ಕಾಲಘಟ್ಟದ ಜತೆಗೆ ಪ್ರಸ್ತುತತೆ ಬಗ್ಗೆಯೂ ಕಥೆ ಸಾಗಲಿದೆಯಂತೆ. ಅದರಂತೆ ಕಾಜಲ್ ಜತೆಗೆ ರೆಜಿನಾ ಕಸಾಂದ್ರ, ಜನನಿ, ರೈಜಾ ಸಹ ನಟಿಸುತ್ತಿದ್ದು, ಇರಾನಿಯನ್ ನಟಿ ನೋಯ್ರಿಕಾ ಪ್ರಮುಖ ಪಾತ್ರದಲ್ಲಿರಲಿದ್ದಾರೆ.
ಸದ್ಯ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಶೀಘ್ರದಲ್ಲಿ ಚಿತ್ರೀಕರಣ ಸಹ ಆರಂಭವಾಗಲಿದೆ.