ನಾನು ಯಾವುದೇ ಸನ್ಯಾಸ ದೀಕ್ಷೆ ಸ್ವೀಕರಿಸಿಲ್ಲ- ಚೈತ್ರಾ ಕೋಟೂರ್ ಸ್ಪಷ್ಟನೆ
Friday, July 23, 2021
ಬೆಂಗಳೂರು: ಬಿಗ್ ಬಾಸ್ ಸೀಸನ್‌ನ 7ರ ಮಾಜಿ ಸ್ಪರ್ಧಿ ಚೈತ್ರಾ ಕೋಟೂರ್ ಆಧ್ಯಾತ್ಮಿಕ ದೀಕ್ಷೆ ಸ್ವೀಕರಿಸಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಆ ಸುದ್ದಿಗೆ ಸ್ವತಃ ಚೈತ್ರಾ ಸ್ಪಷ್ಟನೆ ಕೊಟ್ಟಿದ್ದಾರೆ.
ಆ ಗಾಳಿ ಸುದ್ದಿಗೆ ಉತ್ತರಿಸಿದ ಚೈತ್ರಾ ಕೋಟೂರ್ ‘ಓಶೋ ಮಾರ್ಗದರ್ಶನದಲ್ಲಿ ಧ್ಯಾನದ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದೆ. ಅಲ್ಲಿ ಭಾಗವಹಿಸಿದವರೆಲ್ಲರಿಗೂ ನಿಜವಾದ ಹೆಸರಿನ ಬದಲಿಗೆ ಬೇರೆಯದೇ ನಾಮಕರಣ ಮಾಡಲಾಗುತ್ತದೆ. ಅದೇ ರೀತಿ ನನಗೆ ಮಾ ಪ್ರಗ್ಯಾ ಭಾರತಿ ಎಂದು ಹೆಸರು ಸೂಚಿಸಿದ್ದರು. ಅದು ಆ ಧ್ಯಾನ ಕೇಂದ್ರದಲ್ಲಿನ ನೀತಿ. ನಾನೂ ನಾಲ್ಕು ದಿನಗಳ ಕಾಲ ಭಾಗವಹಿಸಿ ಬಂದಿದ್ದೇನೆ. ಮುಂದೆಯೂ ಆವಾಗಾವಾಗ ಹೋಗುತ್ತೇನೆ. ಇದು ಸನ್ಯಾಸ ದೀಕ್ಷೆ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.