
ನಾಯಿಗೂ ಮನುಷ್ಯರಂತೆ ಸಿಕ್ಕ ಗೌರವ- ಇಲ್ಲಿ ಸ್ಥಾಪನೆಯಾಯಿತು ಪ್ರತಿಮೆ....
ಹೈದರಾಬಾದ್: ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಶ್ವಾನವೊಂದರ ಐದನೇ ವರ್ಷದ ಪುಣ್ಯತಿಥಿ ಸಕಲ ವಿಧಿ-ವಿಧಾನಗಳೊಂದಿಗೆ ನಡೆದಿದೆ. ಅಷ್ಟೇ ಅಲ್ಲದೆ ನಾಯಿಗೆ ಮನುಷ್ಯರಂತೆಯೇ ಪುಣ್ಯಸ್ಮರಣೆ ನಡೆದು, ಪ್ರತಿಮೆ ಕೂಡ ಸ್ಥಾಪನೆಯಾಗಿದೆ.
ನಾಯಿ ಸತ್ತ ಐದು ವರ್ಷಗಳ ಬಳಿಕವೂ ಇವೆಲ್ಲ ನಡೆದಿದೆ.. ಜ್ಞಾನಪ್ರಕಾಶ್ ಎಂಬವರು ತಮ್ಮ ಪ್ರೀತಿಯ ಸಾಕುನಾಯಿಗೆ ಇಷ್ಟೆಲ್ಲ ಮಾಡಿದ್ದಾರೆ. ನಾಯಿಯ ನೆನಪಿಗಾಗಿ ಪ್ರತಿವರ್ಷವೂ ಅದರ ಪುಣ್ಯತಿಥಿ ಆಚರಿಸುತ್ತಿರುವ ಇವರು ಈ ಸಲ ಐದನೇ ವರ್ಷ ಎಂಬ ಕಾರಣಕ್ಕೆ ಪ್ರತಿಮೆಯನ್ನೂ ಮಾಡಿಸಿ ಸ್ಥಾಪಿಸಿದ್ದಾರೆ. ಗ್ರಾಮಸ್ಥರನ್ನೆಲ್ಲ ಆಹ್ವಾನಿಸಿ ಊಟವನ್ನೂ ಹಾಕಿಸಿದ್ದಾರೆ.