ಈಕೆ ಜೀನ್ಸ್ ಪ್ಯಾಂಟ್ ತೊಟ್ಟಿದ್ದೆ ತಪ್ಪಾಯ್ತಾ.. ಬಾಳಿ ಬದುಕಬೇಕಿದ್ದವಳ ಬಾಳಲ್ಲಿ ನಡೆಯಿತು ದುರಂತ..
Friday, July 23, 2021
ಲಖನೌ: ಬಾಲಕಿಯೊಬ್ಬಳು ಟಿ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ತೊಟ್ಟಳು ಎನ್ನುವ ಒಂದೇ ಕಾರಣಕ್ಕೆ ಆಕೆಯ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಾಲಕಿ ನೇಹಾ (16) ವಿದ್ಯಾಭ್ಯಾಸದ ಸಲುವಾಗಿ ಲೂಧಿಯಾನಾದಲ್ಲಿ ತಂಗಿದ್ದಳು. ಅಲ್ಲಿ ಜೀನ್ಸ್, ಟಿ ಶರ್ಟ್ ಹಾಕಿ ಅಭ್ಯಾಸವಿದ್ದ ಆಕೆ ಮನೆಗೆ ಬಂದಾಗಲೂ ಅದೇ ರೀತಿ ಜೀನ್ಸ್ ಮತ್ತು ಟಿ ಶರ್ಟ್ ಹಾಕಿದ್ದಾಳೆ. ಮನೆಯಲ್ಲಿ ಈ ರೀತಿ ಬಟ್ಟೆ ಹಾಕಬೇಡ ಎಂದು ಆಕೆಯ ಚಿಕ್ಕಪ್ಪ ಮತ್ತು ಅಜ್ಜ ಕೂಗಾಡಿದ್ದಾರೆ. ಈ ವಿಚಾರದಲ್ಲಿ ಜಗಳವೂ ಆಗಿದೆ. ಜಗಳವಾಗಿ ಕೆಲ ಕಾಲದ ನಂತರ ಬಾಲಕಿ ಊರ ಹೊರಗಿನ ಸೇತುವೆಯಲ್ಲಿ ಹೆಣವಾಗಿ ನೇತಾಡುತ್ತಿರುವುದು ಕಂಡುಬಂದಿದೆ.
ಈ ವಿಚಾರವಾಗಿ ಬಾಲಕಿಯ ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ನಾನಿಲ್ಲದ ಸಮಯದಲ್ಲಿ ನನ್ನ ಮಗಳ ಚಿಕ್ಕಪ್ಪ ಮತ್ತು ಅಜ್ಜ ಆಕೆಯನ್ನು ಕೊಲೆ ಮಾಡಿದ್ದಾರೆ. ಅವರೇ ಆಕೆಯ ದೇಹವನ್ನು ಅಲ್ಲಿ ಎಸೆದಿದ್ದಾರೆ ಎಂದು ಆಕೆ ದೂರಿನಲ್ಲಿ ದಾಖಲಿಸಿದ್ದಾಳೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.