ಜಾತಕ ನಂಬಿ ಮದುವೆ ಮಾಡಿಕೊಟ್ಟ ಪೋಷಕರಿಗೆ ಕೇಳಿಬಂದಿತ್ತು ಆಘಾತಕಾರಿ ಸುದ್ದಿ..
Friday, July 23, 2021
ತಿರುವನಂತಪುರಂ: ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾದ 19 ವರ್ಷದ ಯುವತಿ ತನ್ನ ಗಂಡನ ಮನೆಯಲ್ಲಿ ವರದಕ್ಷಿಣೆ ಕಿರುಕುಳ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕೇರಳದಲ್ಲಿ ನಡೆದಿದೆ.
ವರ್ಷದ ಸುಚಿತ್ರ ಮೃತ ದುರ್ದೈವಿ.ಈಕೆಗೆ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು ಆದರೆ ಆಕೆ ತನ್ನ ಗಂಡನ ಮನೆಯಲ್ಲಿ ಸುಖವಾಗಿಲ್ಲ ಎಂಬುದು ಆಕೆಯ ತಾಯಿ ಸುನಿತಾಳಿಗೆ ತಿಳಿದಿತ್ತು.ಸುಚಿತ್ರಾಗೆ ಕರೆ ಮಾಡಿದ್ದ ಸುನಿತಾ, ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ ಮಗಳೆ… ಏನೇ ಆಗಲಿ ನಾನು ಮತ್ತು ನಿನ್ನ ತಂದೆ ಜತೆಯಾಗಿರುತ್ತೇವೆ ಎಂದು ಧೈರ್ಯ ತುಂಬಿದ್ದರು.
ಅದಾದ ಮಾರನೇ ದಿನವೇ ಅಂದರೆ ಮಾರ್ಚ್ 22ರಂದು ಸುಚಿತ್ರಾ ಅತ್ತೆ ಮನೆಯ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ನನ್ನ ಮಗಳದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ತಾಯಿ ಸುನಿತಾ ಆರೋಪಿಸಿದ್ದಾರೆ. ಯೋಧನಾಗಿರುವ ವಿಷ್ಣು ಎಂಬಾತನ ಜತೆ ಮಾರ್ಚ್ 21ರಂದು ಕೃಷ್ಣಪುರಂ ನಿವಾಸಿ ಸುಚಿತ್ರಾ ಮದುವೆ ಆಗಿತ್ತು. 20 ವರ್ಷಗಳ ಒಳಗೆ ಮದುವೆ ಆಗದಿದ್ದರೆ ಏಳು ವರ್ಷಗಳ ನಂತರವೇ ಅವಳ ಮದುವೆ ನಡೆಯುವುದು ಎಂಬ ಜಾತಕದ ಮಾತನ್ನು ನಂಬಿ 19 ವರ್ಷದಲ್ಲೇ ಸುಚಿತ್ರಾಳನ್ನು ಮದುವೆ ಮಾಡಿಕೊಟ್ಟಿದ್ದರು.
ಮದುವೆ ವೇಳೆ 51 ಸವರನ್ ಗೋಲ್ಡ್ ಮತ್ತು ಕಾರನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದರೂ ಮದುವೆ ಬಳಿಕ ಸುಚಿತ್ರಾಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು. ಇನ್ನು ಹೆಚ್ಚಿನ ವರದಕ್ಷಿಣೆಗಾಗಿ ಸುಚಿತ್ರಾ ಅತ್ತೆ ಬೇಡಿಕೆ ಇಟ್ಟಿದ್ದರು. ನಾವು ದ್ವಿಚಕ್ರ ವಾಹನ ನೀಡಲು ಒಪ್ಪಿದ್ದೆವು. ಆದರೆ, ಸುಚಿತ್ರಾಳ ಮಾವ ಕಾರಿಗೆ ಬೇಡಿಕೆ ಇಟ್ಟಿದ್ದರು. ನಂತರದ ದಿನಗಳಲ್ಲಿ 10 ಲಕ್ಷ ರೂ.ಗೆ ಒತ್ತಾಯ ಮಾಡಿದ್ದರು ಎಂದು ಸುಚಿತ್ರಾ ತಂದೆ ಹೇಳಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.