ಧಾರಾವಾಹಿ ಮುಗಿಯುವ ತನಕ ಅನು ಸಿರಿಮನೆ ಪಾತ್ರವನ್ನು ನಾನೇ ಮಾಡುತ್ತೇನೆ. ಈ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದಗಳು. ಈ ಗೊಂದಲದಿಂದ ವೀಕ್ಷಕರಲ್ಲಿ ಆತಂಕ ಉಂಟಾಗಿತ್ತು. ಈ ಬಗ್ಗೆ ಎಲ್ಲ ವೀಕ್ಷಕರಲ್ಲೂ ಕ್ಷಮೆ ಕೇಳುತ್ತಿದ್ದೇನೆ. ಇನ್ನು ಮುಂದೆ ಈ ರೀತಿ ಆಗಲ್ಲ’ ಎಂದಿದ್ದಾರೆ ಮೇಘಾ ಶೆಟ್ಟಿ.
‘ಮುಂದೆ ಈ ರೀತಿ ಸುದ್ದಿ ಕೇಳಿ ಬಂದರೆ ಅದಕ್ಕೆ ಗಮನಕೊಡಬೇಡಿ. ಮುಂದೆಯೂ ಇದೇ ರೀತಿ ಬೆಂಬಲಕೊಡಿ. ಜೊತೆ ಜೊತೆಯಲಿ ಧಾರಾವಾಹಿಯಿಂದ ನಾನು ಸಾಕಷ್ಟು ಪಡೆದುಕೊಂಡಿದ್ದೇನೆ. ಅದಕ್ಕೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ವಿಶ್ವಾಸ ಹೀಗೆ ಇರಲಿ’ ಎಂದು ಅವರು ಹೇಳಿದ್ದಾರೆ