ಡಿವೋರ್ಸ್ ನಂತರ ಮಾಜಿ ಹೆಂಡತಿಯೊಂದಿಗೆ ಅಮೀರ್ ಖಾನ್ ಭರ್ಜರಿ ಸ್ಟೆಪ್ ...ವಿಡಿಯೋ ವೈರಲ್
Saturday, July 17, 2021
ಕಾರ್ಗಿಲ್: ಬಾಲಿವುಡ್ ನಟ ಆಮಿರ್ ಖಾನ್ ತಮ್ಮ ಎರಡನೇ ಹೆಂಡತಿ ಕಿರಣ್ ರಾವ್ ವಿಚ್ಛೇದನ ನೀಡಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಈಗ ಅದರ ಬೆನ್ನಲ್ಲೇ ಆಮಿರ್ ಖಾನ್, ಕಿರಣ್ರೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಆಮಿರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾದ ಚಿತ್ರೀಕರಣ ಲಡಾಖ್ನಲ್ಲಿ ನಡೆಯುತ್ತಿದೆ. ಈ ಸಿನಿಮಾಕ್ಕೆ ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಮತ್ತು ರಾಧಿಕ ಚೌಧರಿ ಹಣ ಹೂಡಿದ್ದಾರೆ. ಆ ಕಾರಣದಿಂದಾಗಿ ಕಿರಣ್ ಕೂಡ ಲಡಾಖ್ನಲ್ಲೇ ಇದ್ದಾರೆ. ಇತ್ತೀಚೆಗೆ ಸಿನಿಮಾದ ಶೂಟಿಂಗ್ ವೇಳೆ ಈ ದಂಪತಿಗಳು ಡ್ಯಾನ್ಸ್ ಮಾಡಿದ್ದಾರೆ. ಲಡಾಖ್ನ ಸಾಂಪ್ರದಾಯಿಕ ಉಡುಗೆ ತೊಟ್ಟು ಅವರು ಹಾಕಿರುವ ಹೆಜ್ಜೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.