-->

Mangaluru- ಮಂಗಳೂರು ವಿವಿ ಟೆಲಿಗ್ರಾಂ ಗ್ರೂಪ್ ನಲ್ಲಿ ಪ್ರೊಫೆಸರ್ ಮೊಬೈಲ್  ನಿಂದಲೇ ಅಶ್ಲೀಲ ವೀಡಿಯೋ ಪೋಸ್ಟ್

Mangaluru- ಮಂಗಳೂರು ವಿವಿ ಟೆಲಿಗ್ರಾಂ ಗ್ರೂಪ್ ನಲ್ಲಿ ಪ್ರೊಫೆಸರ್ ಮೊಬೈಲ್ ನಿಂದಲೇ ಅಶ್ಲೀಲ ವೀಡಿಯೋ ಪೋಸ್ಟ್

ಮಂಗಳೂರು: ಮಂಗಳೂರು ವಿವಿಗೆ ಒಳಪಟ್ಟ ವಿವಿಧ ಕಾಲೇಜುಗಳ ಪ್ರೊಫೆಸರ್ ಗಳು ಹಾಗೂ ಉಪನ್ಯಾಸಕರಿರುವ ಟೆಲಿಗ್ರಾಂ ಗ್ರೂಪಿಗೆ ಕೊಡಗು ಮೂಲದ ಪ್ರೊಫೆಸರೊಬ್ಬರು ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ವಿವಿ ಸೈಬರ್ ತನಿಖೆಗೆ ಆದೇಶಿಸಿದೆ. 

ಮಂಗಳೂರು ವಿವಿಯ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಸಲುವಾಗಿ ಈ ಟೆಲಿಗ್ರಾಂ ಗ್ರೂಪ್ ಅನ್ನು ಆರಂಭಿಸಲಾಗಿತ್ತು. ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ವ್ಯಾಪ್ತಿಯ ವಿವಿಧ ಕಾಲೇಜುಗಳ ಸಾವಿರಕ್ಕಿಂತಲೂ ಹೆಚ್ಚು ಸದಸ್ಯರಿದ್ದರು. ಆದರೆ ಈ ಗ್ರೂಪಿಗೆ ಕೊಡಗು ಮೂಲದ ಇಂಗ್ಲಿಷ್ ಪ್ರೊಫೆಸರ್ ಒಬ್ಬರು ಬುಧವಾರ ಸಂಜೆ ಅಶ್ಲೀಲ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.     

ಈ ಬಗ್ಗೆ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಪ್ರತಿಕ್ರಿಯೆ ನೀಡಿ, ಅಶ್ಲೀಲ ವೀಡಿಯೋವೊಂದು ಕೊಡಗಿನ ಪ್ರೊಫೆಸರ್ ಫೋನ್ ನಂಬರ್ ನಿಂದ ಅಪ್ಲೋಡ್ ಆಗಿತ್ತು. ಆದರೆ, ಇದನ್ನು ಉದ್ದೇಶಪೂರ್ವಕ ಹಾಕಲಾಗಿತ್ತೇ, ಅವರ ಫೋನ್ ಹ್ಯಾಕ್ ಆಗಿದೆಯೇ  ಅಥವಾ ಇನ್ನಿತರ ತಾಂತ್ರಿಕ ಕಾರಣಗಳಿಂದ ಗ್ರೂಪಿಗೆ ಪೋಸ್ಟ್ ಆಗಿತ್ತೇ ಎನ್ನುವುದು ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ. ಈ ಬಗ್ಗೆ ಸೈಬರ್ ತಜ್ಞರಿಂದ ತನಿಖೆ ನಡೆಸಲಿದ್ದೇವೆ. ತಜ್ಞರ ವರದಿ ಆಧರಿಸಿ, ಪ್ರೊಫೆಸರ್ ಬಳಿ ವಿವರಣೆ ಕೇಳಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99