ಗಂಡನ ಮನೆಯಲ್ಲಿ ಮಗಳ ಶವ ಪತ್ತೆ.. ಅಳಿಯನ ಮನೆಗೆ ಬೆಂಕಿ ಹಚ್ಚಿದ ಪೋಷಕರು!
Friday, July 9, 2021
ಬಾಗಲಕೋಟೆ: ಗಂಡನಿಂದ ದೂರವಾಗಿ ಪ್ರಿಯಕರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿ ಯುವತಿ ಇಂದು ತನ್ನ ಪ್ರಿಯತಮನ ಮನೆಯಲ್ಲೇ ಸಾವನ್ನಪ್ಪಿದ್ದಾಳೆ.
ಯುವತಿ ಬಸಮ್ಮ ಮಾದರ ಮತ್ತು ರಂಜಿತ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೂ ಯುವತಿಯ ಕುಟುಂಬಸ್ಥರು ಬೇರೊಬ್ಬನೊಂದಿಗೆ ಮದುವೆ ಮಾಡಿದ್ದರು. ಗಂಡನಿಗೆ ಬಸಮ್ಮಳ ಬೇರೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರ ಗೊತ್ತಾಗಿ ಇಬ್ಬರ ವೈವಾಹಿಕ ಜೀವನ ಮುರಿದುಬಿದ್ದಿತ್ತು. ಕೊನೆಗೆ ಪ್ರಿಯಕರ ರಂಜಿತ್ ಜತೆ ಬಸಮ್ಮಗೆ ಮದುವೆ ಮಾಡಲಾಗಿತ್ತು. ಆದರೆ ಇವರಿಬ್ಬರದ್ದೂ ಅಂತರ್ಜಾತಿ ವಿವಾಹ. ರಂಜಿತ್ ಪ್ರತ್ಯೇಕವಾಗಿ ಪತ್ನಿ ಜತೆ ವಾಸವಿದ್ದ.
ಶುಕ್ರವಾರ ಬೆಳಗ್ಗೆ ಬಸಮ್ಮಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗಳ ಸಾವಿಗೆ ಅಳಿಯ ರಂಜಿತ್ ಮತ್ತು ಅವನ ಕುಟುಂಬಸ್ಥರೇ ಕಾರಣ ಎಂದು ಕುಟುಂಬಸ್ಥರು ರಂಜಿತ್ ಮನೆಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರ ಈ ಬಗ್ಗೆ ಪ್ರಕರಣ ದಾಖಲು ಮಾಡಿದ್ದಾರೆ.