ಬಹುದೊಡ್ಡ ದುರಂತಕ್ಕೆ ಕಾರಣವಾಯಿತು ತಾಯಿ-ಮಗಳ ಜತೆಗಿನ ಸಂಬಂಧ !
Friday, July 9, 2021
ಹೈದರಾಬಾದ್: ತಾಯಿ-ಮಗಳು ಓರ್ವನೊಂದಿಗೇ ಇರಿಸಿಕೊಂಡಿದ್ದ ಸಂಬಂಧ ಎಷ್ಟು ದೊಡ್ಡ ದುರಂತಕ್ಕೆ ಕಾರಣವಾಯಿತು ಎಂಬುದು ಈ ಘಟನೆ ಸಾಕ್ಷಿ.
ಆಂಧ್ರ ಪ್ರದೇಶದ ಗುಂಟೂರು ಮೂಲದ ಪರಮೇಶ್ ಎಂಬಾತ ಪದವಿ ಪೂರ್ಣಗೊಳಿಸಿದ್ದು, ಊರಿನಲ್ಲೇ ಬೇಕಾದಷ್ಟು ಆಸ್ತಿ, ಜಮೀನು ಮತ್ತು ಉತ್ತಮವಾದ ನೀರಾವರಿ ವ್ಯವಸ್ಥೆ ಇದ್ದರೂ, ನಗರಕ್ಕೆ ಮನಸೋತು ಒಳ್ಳೆಯ ಉದ್ಯೋಗ ಅರಸಿ ಹೈದರಾಬಾದ್ಗೆ ಬರುತ್ತಾನೆ. ಅಮರಪೇಟೆಯಲ್ಲಿ ಬಾಡಿಗೆ ಮನೆ ಪಡೆದು ಕೆಲ ಕಾಲ ಅಲ್ಲಿಯೇ ನೆಲಸಿ ಬಳಿಕ ಪೆಂಟ್ಹೌಸ್ಗೆ ಸ್ಥಳಾಂತರ ಮಾಡುತ್ತಾನೆ.
ಮನೆಯ ಮಾಲಕರು ಕೆಳಗೆ ಇದ್ದು, ಮೇಲ್ಮಹಡಿಯಲ್ಲಿ ಈತ ಬಾಡಿಗೆಗಿದ್ದ. ಆರ್ಥಿಕವಾಗಿ ಸದೃಢನಾಗಿದ್ದ ಪರಮೇಶ್, ತನ್ನ ಅಭಿಲಾಷೆಯಂತೆ ಕೆಲಸಕ್ಕೆ ಸೇರಿ 6 ತಿಂಗಳು ಹೈದರಾಬಾದ್ ಕಡೆಯಲ್ಲೆಲ್ಲಾ ಸುತ್ತಾಡಿ ಬಳಿಕ ಗುಂಟೂರಿಗೆ ಹೋಗಿ ನೆಲೆಸಲು ನಿರ್ಧರಿಸಿದ್ದ. ಇತ್ತ ಬಾಡಿಗೆ ಮಾಲಕರು ತಾಯಿ-ಮಗಳ ಸಣ್ಣ ಕುಟುಂಬ. ಮನೆಯ ಮಾಲಕಿ ಸುನಯನಾ ಪತಿ ನಾಲ್ಕು ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ಮಗಳೋರ್ವಳು ಇದ್ದು, ಆಕೆ ಪಿಯು ವಿದ್ಯಾರ್ಥಿನಿಯಾಗಿರುತ್ತಾಳೆ. ಪತಿಯ ಪಿಂಚಣಿ ಮತ್ತು ಬಾಡಿಗೆ ಹಣದಿಂದ ಸಣ್ಣ ಕುಟುಂಬ ಜೀವನ ನಡೆಸುತ್ತಿರುತ್ತದೆ. ಸುನಯನಾ 40 ವಯಸ್ಸಿನ ಮಹಿಳೆ. ಬಾಡಿಗೆ ಮನೆಯಲ್ಲಿದ್ದ ಪರಮೇಶ್ ಪರಿಚಯವಾಗಿರುತ್ತದೆ. ಸಲುಗೆ ಬೆಳೆಯುತ್ತದೆ. ಈ ಸಲುಗೆ ದೈಹಿಕ ಸಂಬಂಧದವರೆಗೂ ಹೋಗುತ್ತದೆ. ಆ ಬಳಿಕ ಕೆಲಸ ಹುಡುಕುವುದಕ್ಕೆ ವಿರಾಮ ಹಾಕಿ ಪೂರ್ತಿದಿನ ಸುನಯನಾ ಜತೆ ಕಳೆಯುವುದನ್ನೇ ಕೆಲಸ ಮಾಡಿಕೊಳ್ಳುತ್ತಾನೆ.
ಇದರ ನಡುವೆ ಸುನಯನಾ ಮಗಳು ಪ್ರಿಯಾ ಪಿಯು ವಿದ್ಯಾರ್ಥಿನಿಯಾಗಿದ್ದು, ಆಕೆಯನ್ನು ನಿತ್ಯವೂ ಪರಮೇಶ್ ಕಾಲೇಜಿಗೆ ಡ್ರಾಪ್ ಮಾಡುತ್ತಿರುತ್ತಾನೆ. ಹೀಗೆ ಪಿಕಪ್ ಮತ್ತು ಡ್ರಾಪ್ ನಡೆಯುತ್ತಿರುವಾಗಲೇ ಇತ್ತ ಇಬ್ಬರ ನಡುವೆ ಆಕರ್ಷಣೆ ಉಂಟಾಗುತ್ತದೆ. ಈ ಆಕರ್ಷಣೆಯಿಂದ ಪ್ರಿಯಾ ಪರಮೇಶ್ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಆದರೆ ಪರಮೇಶ್ ಪ್ರಿಯಾ ಜೊತೆಗೂ ದೈಹಿಕ ಸಂಬಂಧ ಹೊಂದುತ್ತಾನೆ. ಪರಮೇಶ್ ಇಬ್ಬರಿಯಯ ತಿಳಿಯದಂತೆ ತಾಯಿ- ಮಗಳ ಜತೆ ದೈಹಿಕ ಸಂಬಂಧ, ರೊಮ್ಯಾನ್ಸ್ ಮುಂದುವರಿಸಿರುತ್ತಾನೆ.
ಒಂದು ದಿನ ಕಾಲೇಜು ಮುಗಿಸಿಕೊಂಡು ಪ್ರಿಯಾ ಆಕಸ್ಮಿಕವಾಗಿ ಮನೆಗೆ ಬರುತ್ತಾಳೆ. ಆಗ ತಾಯಿ, ಪರಮೇಶ್ ಜತೆ ಮಂಚದ ಮೇಲೆ ಸರಸವಾಡುತ್ತಿರುವುದನ್ನು ನೇರವಾಗಿ ನೋಡುತ್ತಾಳೆ. ವಿಚಾರ ತಿಳಿದ ಸುನಯನಾ ಮಗಳನ್ನು ಕೊಲ್ಲಲು ತಂತ್ರ ಹೂಡುತ್ತಾಳೆ. ಘಟನೆ ನಡೆದ ದಿನವೇ ಸಂಜೆ ಪರಮೇಶ್ನನ್ನು ಸುನಯನಾ ಕರೆಯುತ್ತಾಳೆ. ಇಂದು ರಾತ್ರಿ ಪ್ರಿಯಾಳನ್ನು ಕೊಲೆ ಮಾಡುವುದಾಗಿ ಹೇಳುತ್ತಾಳೆ. ಇದರಿಂದ ಪರಮೇಶ್ಗೆ ಶಾಕ್ ಆಗುತ್ತದೆ. ನಾನು ಪ್ರಿಯಾಳನ್ನು ಮದುವೆಯಾದರೂ ನಾನು ನಿಮ್ಮನ್ನು ಬಿಡುವುದಿಲ್ಲ ಎಂದು ಪರಮೇಶ್ ಹೇಳುತ್ತಾನೆ. ಆದರೆ, ಮದುವೆ ಆದರೂ ಸಮಸ್ಯೆ ಬಗೆಹರಿಯುವುದಿಲ್ಲ. ನಮಗಿರುವ ಒಂದೇ ದಾರಿಯೆಂದರೆ ಪ್ರಿಯಾಳನ್ನು ಕೊಲ್ಲುವುದು ಎಂದು ಸುನಾಯಾನಾ ಹೇಳುತ್ತಾಳೆ. ಅಲ್ಲದೆ, ಇಬ್ಬರಿಗೂ ಮೋಸ ಮಾಡಿದ ಎಂದು ದೂರು ನೀಡುತ್ತೇವೆ ಎಂದು ಬೆದರಿಕೆ ಹಾಕುತ್ತಾಳೆ. ಕೊನೆಗೆ ಪ್ರಿಯಾಳನ್ನು ಕೊಲೆ ಮಾಡಲು ಪರಮೇಶ್ ಒಪ್ಪಿಕೊಳ್ಳುತ್ತಾನೆ.
ಅದರಂತೆ ರಾತ್ರಿ ಸುನಯನಾ ಹಾಗೂ ಪರಮೇಶ್ ಸೇರಿ ಪ್ರಿಯಾಳನ್ನು ಉಸಿರುಗಟ್ಟಿಸಿ ಸಾಯಿಸುತ್ತಾರೆ. ಮಾರನೇ ದಿನ ದೊಡ್ಡ ಡ್ರಾಮವನ್ನು ಸೃಷ್ಟಿ ಮಾಡುತ್ತಾರೆ. ಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸುತ್ತಾರೆ. ಆದರೆ, ಪೊಲೀಸರಿಗೆ ಈ ಘಟನೆ ಬಗ್ಗೆ ಅನುಮಾನ ಇರುತ್ತದೆ. ಬಳಿಕ ತನಿಖೆಯು ಆರಂಭವಾಗುತ್ತದೆ. ಪ್ರಿಯಾ ಕೈಯಲ್ಲಿ ಪರಮೇಶ್ ಟ್ಯಾಟೂ ಇರುವುದು ತಿಳಿಯುತ್ತದೆ. ತಕ್ಷಣ ಪರಮೇಶ್ನನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಮರಣೋತ್ತರ ವರದಿಯಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತದೆ. ಆಕೆಯ ಮೇಲೆ ಅನೇಕ ಬಾರಿ ಲೈಂಗಿಕ ಸಂಪರ್ಕ ಆಗಿರುತ್ತದೆ. ಅಲ್ಲದೆ, ಆಕೆಯು ಗರ್ಭಿಣಿಯು ಆಗಿರುತ್ತಾಳೆ. ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬುದು ವರದಿಯಿಂದ ತಿಳಿಯುತ್ತದೆ. ಇದು ಪೂರ್ವನಿಯೋಜಿತ ಕೊಲೆ ಎಂಬುದು ಗೊತ್ತಾಗುತ್ತದೆ. ಬಳಿಕ ಪರಮೇಶ್ನನ್ನು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆತ ಎಲ್ಲವನ್ನು ಬಾಯ್ಬಿಡುತ್ತಾನೆ. ಇದಾದ ಬಳಿಕ ಸುನಾಯಾನಾ ಕೂಡ ತಪ್ಪೊಪ್ಪಿಕೊಳ್ಳುತ್ತಾನೆ. ಈ ಘಟನೆ ಕೆಲವೇ ವರ್ಷಗಳ ಹಿಂದೆ ನಡೆದಿದ್ದು, ಹೈದರಾಬಾದ್ನಲ್ಲಿ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಸದ್ಯ ಪರಮೇಶ್ ಮತ್ತು ಸುನಯನಾ ಬಂಧನದಲ್ಲಿದ್ದಾರೆ.