Mangalore: ಲಾಡ್ಜ್ ನಲ್ಲಿ ಯುವತಿಯ ಅತ್ಯಾಚಾರ: ಆಕೆಯ ಬೆತ್ತಲೆ ಪೊಟೋ ವನ್ನು ಗಂಡನಿಗೆ ಕಳಿಸಿ ಡೈವೋರ್ಸ್ ಗೆ ಕಾರಣನಾದ ಪ್ರಿಯತಮ!
Thursday, July 15, 2021
ಮಂಗಳೂರು: ಪ್ರಿಯಕರನೋರ್ವನು ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿರುವ ಹಳೆಯ ವೀಡಿಯೋವೊಂದನ್ನು ಆಕೆಯ ಪತಿಯ ಮೊಬೈಲ್ ಫೋನ್ ಗೆ ರವಾನಿಸಿದ್ದಾನೆ. ವೀಡಿಯೋ ನೋಡಿದ ಪತಿ ವಿಚ್ಛೇದನಕ್ಕೆ ಪಟ್ಟು ಹಿಡಿದಿದ್ದು, ಇದೀಗ ಯುವತಿ ಪ್ರಿಯಕರನ ಮೇಲೆಯೇ ಅತ್ಯಾಚಾರದ ದೂರು ದಾಖಲಿಸಿರುವ ವಿಚಿತ್ರ ಪ್ರಕರಣವೊಂದು ನಡೆದಿದೆ.
ಪುತ್ತೂರು ತಾಲೂಕಿನ ವಿಜೇಶ್ ಹಾಗೂ ಯುವತಿ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ವಿಜೇಶ್ 2016ರ ನವೆಂಬರ್ ತಿಂಗಳಿನ ಎರಡನೇ ವಾರದ ಒಂದು ದಿನ ತನ್ನ ಪ್ರಿಯತಮೆಯನ್ನು ಚಹಾ ಕುಡಿಯಲು ಹೊಟೇಲ್ ಗೆ ಕರೆದಿದ್ದಾನೆ. ಪುತ್ತೂರಿನ ದರ್ಬೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಪ್ರಿಯಕರ ಕರೆದಿರುವುದಕ್ಕೆ ಬಂದಿದ್ದಾಳೆ.
ಆದರೆ ಪ್ರಿಯಕರ ವಿಜೇಶ್ ಚಹಾ ಕುಡಿಯಲು ಹೊಟೇಲ್ ಗೆ ಕರೆದೊಯ್ಯದೆ, ಆಕೆಯನ್ನು ಕಾರಿನಲ್ಲಿ ನೇರವಾಗಿ ಸುರತ್ಕಲ್ ಬಳಿಯ ರೆಡ್ ರಾಕ್ ಲಾಡ್ಜ್ ಗೆ ಕರೆತಂದಿದ್ದಾನೆ. ಅಲ್ಲಿ ಯುವತಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾನೆ. ಅಲ್ಲದೆ ಅದನ್ನು ಫೋಟೋ ತೆಗೆದುಕೊಂಡು, ವೀಡಿಯೋ ಚಿತ್ರೀಕರಿಸಿ ಇಟ್ಟುಕೊಂಡಿದ್ದ.
ಆದರೆ ಆಕೆಗೆ 2021ರ ಜುಲೈ 3ರಂದು ಬೇರೆ ಯುವಕನೊಂದಿಗೆ ವಿವಾಹವಾಗಿತ್ತು. ಇದೀಗ ಪ್ರಿಯಕರ ವಿಜೇಶ್ ಯುವತಿಯ ಪತಿಗೆ ಆಕೆಯೊಂದಿಗಿನ ಲೈಂಗಿಕ ಸಂಪರ್ಕದ ವೀಡಿಯೋ ಹಾಗೂ ಫೋಟೋವನ್ನು ರವಾನಿಸಿದ್ದಾನೆ. ಇದರಿಂದ ಆಕೆಯ ಪತಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಲು ಹತ್ತಿದ್ದಾನೆ. ಇತ್ತ ಯುವತಿ ಪ್ರಿಯಕರನ ಮೇಲೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದಾಳೆ.