ಕರೀನಾ ಕಪೂರ್ ವಿರುದ್ದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ- ಕಾರಣ ಏನು? ಇಲ್ಲಿದೆ ಮಾಹಿತಿ
ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ತಮ್ಮ ಗರ್ಭಾವಸ್ಥೆಯಲ್ಲಿನ ದೈಹಿಕ ಮತ್ತು ಮಾನಸಿಕ ತೊಳಲಾಟಗಳ ಕುರಿತಾಗಿ ನಟಿ ಕರೀನಾ ಕಪೂರ್ ಪುಸ್ತಕ ಬರೆದಿದ್ದು, ಅದಕ್ಕೆ 'ಪ್ರಗ್ನೆನ್ಸಿ ಬೈಬಲ್' ಎಂದು ಹೆಸರಿಟ್ಟಿದ್ದರು.
'ಪ್ರಗ್ನೆನ್ಸಿ ಬೈಬಲ್' ಬುಕ್ ಬರೆದ ಕರೀನಾ ಕಪೂರ್, ಅದಿತಿ ಶಾ ಭೀಮ್‌ಜಾನಿ ಹಾಗೂ ಪುಸ್ತಕವನ್ನು ಪಬ್ಲಿಶ್ ಮಾಡಿದ ಜಗ್ಗರ್‌ನಾಟ್ ಬುಕ್ಸ್ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಆಲ್ಫಾ ಒಮೇಗಾ ಕ್ರಿಶ್ಚಿಯನ್ ಮಹಾಸಂಘದ ಅಧ್ಯಕ್ಷ ಆಶೀಶ್ ಶಿಂಧೆ ದೂರು ನೀಡಿದ್ದಾರೆ.
ಶೀರ್ಷಿಕೆಯಲ್ಲಿ ಪವಿತ್ರವಾದ 'ಬೈಬಲ್' ಹೆಸರನ್ನು ಬಳಸಿರುವುದಕ್ಕೆ ನಮ್ಮ ಆಕ್ಷೇಪವಿದೆ. ಇದರಿಂದ ಕ್ರಿಶ್ಚಿಯನ್‌ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಆಶೀಶ್ ಶಿಂಧೆ ಹೇಳಿದ್ದಾರೆ.ಈ ಬಗ್ಗೆ ಕರೀನಾ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.