ಬಾಲಕಿಯ ರಕ್ಷಣೆಕಳೆದ ಒಂದು ವಾರದ ಹಿಂದೆ ಬಾಲಕಿಗೆ ಮದುವೆ ಮಾಡಲಾಗಿತ್ತು. ಇದರಿಂದ ಮನನೊಂದಿದ್ದ ಆಕೆ ನಿನ್ನೆ ರಾತ್ರಿ ಮನೆ ಬಿಟ್ಟು ಬಂದಿದ್ದಳು. ರಾಷ್ಟ್ರೀಯ ಹೆದ್ದಾರಿ 75ರ ನಂಗಲಿ ಬಳಿಯ ಹೆದ್ದಾರಿಯಲ್ಲಿ ಇದ್ದ ಬಾಲಕಿಯನ್ನ ವಿಚಾರಣೆ ನಡೆಸಿ, ಆಕೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಒಪ್ಪಿಸಿದ್ದಾರೆ.
ಪೋಷಕರು ಈ ಮದುವೆ ಮಾಡಿಸಿದ್ದು, ಇಷ್ಟವಿಲ್ಲದ ಕಾರಣ ಮನೆ ಬಿಟ್ಟು ಬಂದಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಅಧಿಕಾರಿಗಳು ಬಾಲಕಿಯಿಂದ ಪೋಷಕರ ಮಾಹಿತಿ ಪಡೆದು ಕ್ರಮ ಜರುಗಿಸಲು ಮುಂದಾಗಿದ್ದಾರೆ.