Mangalore: ಕೊರೊನಾ ನಡುವೆಯೂ ಮುಂದುವರಿದ ಅಕ್ರಮ ಚಿನ್ನ ಸಾಗಾಟ; ಈತ ಎಲ್ಲಿ ಬಚ್ಚಿಟ್ಟುಕೊಂಡು ಬಂದಿದ್ದ ಗೊತ್ತಾ? ಛಿ..
Friday, July 2, 2021
ಮಂಗಳೂರು; ಕೊರೊನಾ ಸಂಕಷ್ಟದ ನಡುವೆಯು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಕಾರ್ಯ ಮುಂದುವರಿದಿದೆ.ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಕೇರಳದ ಕಾಸರಗೋಡು ವ್ಯಕ್ತಿ ಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೇರಳ್ ಕಾಸರಗೋಡು ಜಿಲ್ಲೆಯ ಮೊಯ್ದಿನ್ ಮುನಾಸಿರ್ ಪದಿನಾರ್ ಎಂಬಾತ ದುಬೈನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನು. ಈತ ಇಂದು ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದು ಈತನನ್ನು ತಪಾಸಣೆ ಮಾಡುವ ವೇಳೆ 430 ಗ್ರಾಂ ಚಿನ್ನ ಸಿಕ್ಕಿದೆ. ಇದರ ಮೌಲ್ಯ ರೂ 20.89 ಲಕ್ಷ ರೂ ಎಂದು ಅಂದಾಜಿಸಲಾಗಿದೆ
ಗುದನಾಳದಲ್ಲಿ ಅಡಗಿಸಿ ಸಾಗಾಟ
ಈತ 430 ಗ್ರಾಂ ಚಿನ್ನವನ್ನು ಗುದನಾಳದಲ್ಲಿ ಅಡಗಿಸಿಟ್ಟು ಸಾಗಾಟ ಮಾಡಿದ್ದಾನೆ. ಚಿನ್ನವನ್ನು ಪೌಡರ್ ರೂಪಕ್ಕೆ ತರಿಸಿ ಅದನ್ನು ಗುದನಾಳದಲ್ಲಿ ಅಡಗಿಸಿಟ್ಟು ಸಾಗಾಟ ಮಾಡಿದ್ದಾನೆ. ಈ ಹಿಂದೆಯು ಗುದನಾಳದಲ್ಲಿ ಚಿನ್ನ ಸಾಗಟ ಮಾಡುತ್ತಿರುವುದನ್ನು ಮಂಗಳೂರು ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದರು.