Mangalore : ಪೊಲೀಸರ ಮನೆಯ ಹೆಂಗಸರನ್ನು ಅತ್ಯಾಚಾರ ಮಾಡಿ ಸುಡಬೇಕು- ಸಿಎಎ ವೇಳೆ ಗೋಲಿಬಾರ್ ವಿರೋಧಿಸಿ ಹೀಗೆಂದು Facebook ಪೋಸ್ಟ್ ಮಾಡಿದಾತ ಅಂದರ್!
Wednesday, July 7, 2021
ಮಂಗಳೂರು; ಮಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪೊಲೀಸರ ಮನೆಯ ಹೆಂಗಸರ ಬಗ್ಗೆ ಅವಹೇಳನಕಾರಿಯಾಗಿ ಫೇಸ್‌ಬುಕ್ ಪೋಸ್ಟ್ ಮಾಡಿ ಅಪರಾಧಕ್ಕೆ ಪ್ರಚೋದಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ 2019 ಡಿಸೆಂಬರ್ ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆದಿತ್ತು. ಅನುಮತಿ ಇಲ್ಲದಿದ್ದರೂ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್ ನಡೆದು ಇಬ್ಬರು ಸಾವನ್ನಪ್ಪಿದ್ದರು.ಈ ಸಂದರ್ಭದಲ್ಲಿ ಯೋಗಿ ಯೋಗೇಶ್ ಎಂಬಾತ ಫೇಸ್‌ಬುಕ್ ಪೋಸ್ಟ್ ಮಾಡಿ ಪೊಲೀಸರ ಕುಟುಂಬದ ವರಲ್ಲಿ ಆತಂಕ ಸೃಷ್ಟಿಸಿದ್ದ. ಈತ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೊಲೀಸ್ ಮನೆಯ ಹೆಂಗಸರನ್ನು ಮನೆ ನುಗ್ಗಿ ಅತ್ಯಾಚಾರ ಮಾಡಬೇಕು ಎಂದು ಪೋಸ್ಟ್ ಮಾಡಿದ್ದ.ಇದನ್ನು ಮನಸುಗಳ ಮಾತು ಮಧುರ ಎಂಬ Fb ಪೇಜ್ ಗೆ ಟ್ಯಾಗ್ ಮಾಡಿ ಅದರ ಸ್ಕ್ರೀನ್ ಶಾಟ್ ವಾಟ್ಸಪ್ ನಲ್ಲಿ ಪ್ರಚುರಪಡಿಸಿದ್ದ. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿದ್ದ ಸೈಬರ್ ಠಾಣಾ ಪೊಲೀಸರು ಆರೋಪಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಾಲವ್ವನ ಹಳ್ಳಿಯ ಯೋಗೇಶ್ ಎಸ್ (28) ಎಂಬಾತನನ್ನು ಬಂಧಿಸಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.