-->
ads hereindex.jpg
ಅಮಾಯಕ ಯುವತಿಗೆ ವಂಚನೆ: ಅರಣ್ಯಾಧಿಕಾರಿಯ ಬಂಧನ..!!

ಅಮಾಯಕ ಯುವತಿಗೆ ವಂಚನೆ: ಅರಣ್ಯಾಧಿಕಾರಿಯ ಬಂಧನ..!!

 ,
ಮಲ್ಕಂಗಿರಿ (ಒಡಿಶಾ): ಅರಣ್ಯಾಧಿಕಾರಿಯೊಬ್ಬರು ಯುವತಿಯನ್ನ ನಂಬಿಸಿ ಆಕೆಗೆ ವಂಚಿಸಿ ನಂತರ ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಬಂಧಕ್ಕೀಡಾಗಿರುವ ಘಟನೆ ಒಡಿಶಾದ ಮಲ್ಕಂಗಿರಿಯಲ್ಲಿ ನಡೆದಿದೆ. 

ಬಂಧಿತನನ್ನು ಅರಣ್ಯಾಧಿಕಾರಿ ಮುರಳೀಧರ್​ ಎಂದು ಗುರುತಿಸಲಾಗಿದೆ. . ಕಳೆದ ಏಪ್ರಿಲ್​ ತಿಂಗಳಲ್ಲಿ ಬುಡಕಟ್ಟು ಜನಾಂಗದ ಅಮಾಯಕ ಯುವತಿಯನ್ನು ಆರೋಪಿ ಮುರಳೀಧರ್​ ತನ್ನ ಕ್ವಾರ್ಟರ್ಸ್​ಗೆ ಕರೆಸಿಕೊಂಡಿದ್ದಾನೆ. ನಿನ್ನಂತಹ ಯುವತಿಯನ್ನೇ ನಾನು ಮದುವೆ ಆಗಬೇಕೆಂದುಕೊಂಡಿದ್ದೇನೆ. ನೀನು ಬಯಸಿದರೆ ಇಬ್ಬರು ಮದುವೆ ಆಗೋಣ ಎಂದಿದ್ದಾನೆ. ಪ್ರೀತಿಯ ಹೆಸರಲ್ಲಿ ಆಕೆ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಕೆಲವು ದಿನಗಳ ಹಿಂದೆ ಮುರಳೀಧರ ಮತ್ತೊಂದು ಮದುವೆ ಆಗಿದ್ದಾನೆ. 

ಬಳಿಕ ಈ ವಿಚಾರ ಸಂತ್ರಸ್ತ ಯುವತಿಗೆ ತಿಳಿದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುರಳೀಧರನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 

Ads on article

Advertise in articles 1

advertising articles 2

IMG_20220827_133242

Advertise under the article

IMG-20220907-WA0033 IMG_20220827_133242