
ಕೋವಿಡ್ ಲಸಿಕೆ ಪಡೆದ ಬಳಿಕ ಮತ್ತೆ ದೃಷ್ಟಿ ಕಾಣಲು ಆರಂಭ: ದೇಶದ ಎಲ್ಲರ ನೋಟ ವೃದ್ಧೆಯತ್ತ
Wednesday, July 7, 2021
ಮುಂಬೈ: ಕೋವಿಡ್ ಲಸಿಕೆ ಪಡೆದ ಬಳಿಕ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಕಾಣಿಸಿಕೊಂಡಿದೆ. ಕಬ್ಬಿಣದ ವಸ್ತುಗಳು ಮೈಗಂಟುತ್ತಿವೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಹಳೆಯದಾಗಿವೆ. ಈಗ ಅದಕ್ಕೆ ಹೊಸ ಸೇರ್ಪಡೆ ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ವರ್ಷಗಳ ಹಿಂದೆ ಹೋಗಿದ್ದ ದೃಷ್ಟಿಯೇ ವಾಪಸು ಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ನಿವಾಸಿ ಮಥುರಾಬಾಯಿ ಬಿಡ್ವೆ(70) ಎಂಬ ವೃದ್ಧೆಯು ಒಂಬತ್ತು ವರ್ಷಗಳ ಹಿಂದೆ ಎರಡೂ ಕಣ್ಣುಗಳ ದೃಷ್ಟಿಗಳನ್ನು ಕಳೆದುಕೊಂಡಿದ್ದಳು. ವೃದ್ಧೆಗೆ ಜೂನ್ 26ರಂದು ಕೋವಿಶೀಲ್ಡ್ ಲಸಿಕೆಯ ಮೊದಲನೇ ಡೋಸೇಜ್ ಕೊಡಿಸಲಾಗಿತ್ತು. ಲಸಿಕೆ ಪಡೆದ ಬಳಿಕ ಆಕೆಯ ಎರಡೂ ಕಣ್ಣುಗಳು ಶೇ.30-40ರಷ್ಟು ಕಾಣಲಾರಂಭಿಸಿವೆಯಂತೆ.
ಈ ರೀತಿ ಮಹಿಳೆಯೇ ಹೇಳಿಕೊಂಡಿದ್ದು, ಪೂರ್ತಿ ದೇಶವೇ ಆಕೆಯನ್ನು ಅಚ್ಚರಿಯಿಂದ ನೋಡುವಂತಾಗಿದೆ. ಆದರೆ ಇದಕ್ಕೆ ವೈಜ್ನಾನಿಕವಾಗಿ ಯಾವುದೇ ಪುರಾವೆಗಳಿಲ್ಲ. ಈ ವಿಚಾರ ಸದ್ಯ ದೇಶದೆಲ್ಲೆಡೆ ಹರಿದಾಡುತ್ತಿದ್ದು, ಇದರ ಬಗ್ಗೆ ಪರಿಣತರು ಪರಿಶೀಲನೆ ನಡೆಸಿದ ನಂತರವೇ ನಿಜಾಂಶ ಹೊರಬರಬೇಕಿದೆ.