
Mangalore: ಅವಳಿ ಮಕ್ಕಳಿಗೆ ಜನ್ಮ ನೀಡಿ ಸಾವನ್ನಪ್ಪಿದ 30 ವರ್ಷದ ಮಹಿಳೆ!
Thursday, July 15, 2021
ಮಂಗಳೂರು: ಅವಳಿ ಮಕ್ಕಳಿಗೆ ಜನ್ಮ ನೀಡಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನಲ್ಲಿ ನಡೆದಿದೆ.
ಕಡಬ ತಾಲೂಕಿನ ಕೊಂಬಾರು ಇಡ್ಯಡ್ಕ ಕಟ್ಟೆ ನಿವಾಸಿ ಚೇತನ್ ಎಂಬವರ ಪತ್ನಿ ವಿದ್ಯಾ (30) ಮೃತಪಟ್ಟವರು. ಇವರು ಮೂಲತಃ ಸುಳ್ಯ ತಾಲೂಕಿನ ಚಾರ್ವಾಕ ಇಡ್ಯಡ್ಕ ನಿವಾಸಿಯಾಗಿದ್ದು,ಕಡಬ ತಾಲೂಕಿನ ಕೊಂಬಾರಿನ ಚೇತನ್ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು.
ಇವರಿಗೆ ಹೆರಿಗೆಯ ಸಮಯದಲ್ಲಿ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ.
ವಿದ್ಯಾ (30) ಅವರನ್ನು ಹೆರಿಗೆಗೆ ಮಂಗಳೂರಿನ ಲೇಡಿಗೋಷನ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ವಿದ್ಯಾ ಅವರಿಗೆ ಈ ಮೊದಲು ಎರಡು ಹೆಣ್ಣು ಮಕ್ಕಳಿತ್ತು.ಇವರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ವಿಪರೀತವಾಗಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ . ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ.
ಮೃತರು ತಂದೆ, ತಾಯಿ, ತಮ್ಮ,ತಂಗಿ,ಪತಿ ಹಾಗೂ ನವಜಾತ ಮಕ್ಕಳನ್ನು ಸೇರಿದಂತೆ ನಾಲ್ಕು ಮಕ್ಕಳನ್ನು ಅಗಲಿದ್ದಾರೆ.