ರಸ್ತೆ ಬದಿ ಕ್ವಿಂಟಾಲ್ಗಟ್ಟಲೆ ಚಾಕೋಲೇಟ್ ಗಳನ್ನು ಎಸೆದು ಹೋದ ಡೀಲರ್..!
Thursday, July 15, 2021
ಉತ್ತರ ಕನ್ನಡ: ಮಾರುಕಟ್ಟೆಯಲ್ಲಿ ಮಾರಾಟ ಆಗದ ಡೇಟ್ ಬಾರ್ ಆಗಿರುವ ಕ್ವಿಂಟಾಲ್ಗಟ್ಟಲೆ ಚಾಕಲೇಟ್ ರಸ್ತೆ ಬದಿ ಬಿದ್ದಿದ್ದು, ಅನೇಕ ಮಕ್ಕಳು ಕೈತುಂಬ ಬಾಚಿಕೊಂಡು ಹೋಗಿದ್ದಾರೆ.
ಕ್ಯಾಂಡಿ ಕಂಪನಿಯ ಡೀಲರ್ ಈ ರೀತಿ ಚಾಕಲೇಟ್ ಅನ್ನು ರಸ್ತೆ ಬದಿ ರಾಶಿ ಹಾಕಿ ಹೋಗಿದ್ದಾನೆ ಎನ್ನಲಾಗಿದೆ.
ಈ ರೀತಿ ಚಾಕಲೇಟ್ ಅನ್ನು ರಸ್ತೆ ಬದಿ ರಾಶಿ ಹಾಕಿರುವುದರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ದನಗಳು ಚಾಕಲೇಟ್ ತಿನ್ನುತ್ತಿವೆ. ಕೆಲ ಮಕ್ಕಳೂ ಚಾಕಲೇಟ್ ತೆಗೆದುಕೊಂಡು ಹೋಗಿದ್ದಾರೆ. ಚಾಕಲೇಟ್ ನೀರಿನೊಂದಿಗೆ ಸೇರಿಕೊಂಡು ಹೋಗಿ ಹತ್ತಿರದ ಕೆರೆಯ ನೀರೂ ಮಲಿನವಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ನಗರಸಭೆಗೆ ದೂರು ನೀಡಿದ್ದಾರೆ.