
ಸಿನಿಮಾದಲ್ಲಿ ಸೋನು ಸೂದ್ ಗೆ ಹೊಡೆದರೆಂದು ಟಿವಿ ಕುಟ್ಟಿಪುಡಿ ಮಾಡಿದ ಛೋಟಾ ಫ್ಯಾನ್.!
Thursday, July 15, 2021
ಸಿನಿಮಾದಲ್ಲಿ ಸೋನು ಸೂದ್ ಅವರಿಗೆ ಹೊಡೆದರೆಂಬ ಕಾರಣಕ್ಕೆ ಬಾಲಕನೊಬ್ಬ ಕೋಪದಿಂದ ಮನೆಯ ಟಿವಿಯನ್ನು ಕುಟ್ಟಿ ಪುಡಿ ಮಾಡಿದ್ದಾನೆ.
ಸಂಗರೆಡ್ಡಿ ಊರಿನ ಏಳು ವರ್ಷದ ಬಾಲಕ ವಿರಾಟ್ ಈ ಕೃತ್ಯ ಮಾಡಿದ್ದಾನೆ. ಈತ ಹೀರೋ’ ಸೋನು ಸೂದ್ ಖಳನಟನಾಗಿ ನಟಿಸಿದ್ದ ‘ದೂಕುಡು’ ಸಿನಿಮಾ ನೋಡುತ್ತಿದ್ದ. ಆ ಸಿನಿಮಾದಲ್ಲಿ ಅವರು ಖಳನಟನಾಗಿ ಅಭಿನಯಿಸಿದ್ದರು.ಸಿನಿಮಾದಲ್ಲಿ ಅವರಿಗೆ ಹೊಡೆಯುವುದನ್ನು ಕಂಡ ಬಾಲಕ ತನ್ನ ಕೋಪವನ್ನು ತಡೆಯಲಾರದೆ ಟಿವಿಯನ್ನು ಕುಡಿ ಮಾಡಿದ್ದಾನೆ.
ಈತ ಮಾಡಿರುವ ವಿಷಯ ಸುದ್ದಿಯಾಗುತ್ತಿದ್ದಂತೆಯೇ ವಿಷಯ ಸೋನು ಸೂದ್ ಕಿವಿಗೂ ಬಿದ್ದಿದೆ. ವಿರಾಟ್ ಟಿವಿ ಪುಡಿ ಮಾಡಿದ ವಿಡಿಯೋವನ್ನು ಸೋನು ಸೂದ್ ಟ್ವೀಟ್‍ನಲ್ಲಿ ಹಂಚಿಕೊಂಡು, ಅರೆ, ಟಿವಿ ಪುಡಿ ಮಾಡಿಬಿಟ್ಯಾ! ನಿಮ್ಮ ತಂದೆ ನನಗೆ ಹೊಸ ಟಿವಿಯನ್ನು ತಂದು ಕೊಡಲು ಹೇಳಿದರೆ ಏನು ಮಾಡಲಿ ಎಂದು ಉತ್ತರಿಸಿದ್ದು ಇದೀಗ ವೈರಲ್ ಆಗಿದೆ.